ಬ್ಯಾಸ್ಕೆಟ್‌ಬಾಲ್‌: ಕೇಂದ್ರೀಯ ವಿದ್ಯಾಲಯಕ್ಕೆ ಗೆಲುವು

7

ಬ್ಯಾಸ್ಕೆಟ್‌ಬಾಲ್‌: ಕೇಂದ್ರೀಯ ವಿದ್ಯಾಲಯಕ್ಕೆ ಗೆಲುವು

Published:
Updated:

ಬೆಂಗಳೂರು:  ಕಾರ್ತಿಕಿ ಗಳಿಸಿದ 16 ಪಾಯಿಂಟ್‌ಗಳ ನೆರವಿನಿಂದ ಕೇಂದ್ರಿಯ ವಿದ್ಯಾಲಯ ಬಾಲಕಿಯರ ತಂಡ, ರಾಜ್ಯ ಮಟ್ಟದ ಶಾಲಾ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಶುಕ್ರವಾರದ ಪಂದ್ಯದಲ್ಲಿ 25–10 ಪಾಯಿಂಟ್‌ಗಳಿಂದ ಸ್ಟೆಲ್ಲಾ ಮಾರಿಸ್‌ ಹೈಸ್ಕೂಲು ಎದುರು ಜಯ ಸಾಧಿಸಿತು.ಮಲ್ಯ ಅದಿತಿ ಇಂಟರ್‌ನ್ಯಾಷನಲ್‌ ಶಾಲೆಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯ ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಬಿಷಪ್‌ ಕಾಟನ್‌ 51–22 ಪಾಯಿಂಟ್‌ಗಳಿಂದ ಇಂದಿರಾನಗರದ ಪಿ.ಪಿ.ಇ.ಸಿ. ಎದುರು ಜಯ ಸಾಧಿಸಿತು. ಬಾಲಕರ ವಿಭಾಗದ ಪಂದ್ಯದಲ್ಲಿ ದೆಹಲಿ ಪಬ್ಲಿಕ್‌ ಶಾಲೆ 33–25ರಲ್ಲಿ ಮಲ್ಯ ಅದಿತಿ ಶಾಲೆಯ ಮೇಲೆ ಜಯ ಸಾಧಿಸಿತು.ಲೂ, ಕುಮಾರನ್ಸ್‌ 32–28ರಲ್ಲಿ ಕೇಂದ್ರೀಯ ವಿದ್ಯಾಲಯದ ವಿರುದ್ಧವೂ ಗೆಲುವು ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry