ಬುಧವಾರ, ಜೂನ್ 16, 2021
21 °C

ಬ್ಯಾಸ್ಕೆಟ್‌ಬಾಲ್‌: ಪ್ರೆಸಿಡೆನ್ಸಿ ಕಾಲೇಜ್‌ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶೋಭಿತ್‌ ತಂದಿತ್ತ 17 ಪಾಯಿಂಟ್‌ಗಳ ನೆರವಿನಿಂದ ಪ್ರೆಸಿಡೆನ್ಸಿ ಕಾಲೇಜು ತಂಡ ಇಲ್ಲಿ ನಡೆಯುತ್ತಿರುವ ರಾಜ್ಯ ಬ್ಯಾಸ್ಕೆಟ್‌ಬಾಲ್ ಲೀಗ್‌ ಟೂರ್ನಿಯಲ್ಲಿ ಜಯ ಪಡೆಯಿತು.



ಗುರುವಾರ ನಡೆದ ಪಂದ್ಯದಲ್ಲಿ ಪ್ರೆಸಿಡೆನ್ಸಿ ಕಾಲೇಜು 37-35 ರಲ್ಲಿ ಆರ್‌ವಿಸಿಇ ತಂಡವನ್ನು ಮಣಿಸಿತು.  ವಿರಾಮದ ವೇಳೆಗೆ ವಿಜಯಿ ತಂಡ 19-17 ರಲ್ಲಿ ಮುನ್ನಡೆ ಸಾಧಿಸಿತ್ತು.



ಪುರುಷರ ವಿಭಾಗದ ಇತರ ಪಂದ್ಯ ಗಳಲ್ಲಿ ಎಸ್‌ಬಿಎಂ ಜೈನ್‌ ಕಾಲೇಜು 27-17 ರಲ್ಲಿ ಎಂವಿಐಟಿ ಎದುರೂ, ಸುರಾನಾ ಕಾಲೇಜು 52-28 ರಲ್ಲಿ ನ್ಯೂ ಹೊರೈಜನ್‌ ಕಾಲೇಜು ಮೇಲೂ, ಸೇಂಟ್‌ ಜೋಸೆಫ್‌ ಕಾಮರ್ಸ್‌ ಕಾಲೇಜು 56-34 ರಲ್ಲಿ ಬಿಎಂಎಸ್‌ಸಿಇ ವಿರುದ್ಧವೂ ಜಯ ಪಡೆದವು.



ಮಹಿಳೆಯರ ವಿಭಾಗದಲ್ಲಿ ಎಸ್‌ಬಿಎಂ ಜೈನ್‌ ತಂಡ 38-23 ರಲ್ಲಿ ಮೌಂಟ್‌ ಕಾರ್ಮೆಲ್‌ ವಿರುದ್ಧವೂ, ಸೇಂಟ್‌ ಜೋಸೆಫ್ಸ್‌ 39-34 ರಲ್ಲಿ ಬಿಎಂಎಸ್‌ಸಿಇ ಮೇಲೂ ಗೆದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.