ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಇಂದು ಮೊದಲ ಸವಾಲು

7

ಬ್ಯಾಸ್ಕೆಟ್‌ಬಾಲ್‌: ಭಾರತಕ್ಕೆ ಇಂದು ಮೊದಲ ಸವಾಲು

Published:
Updated:

ನವದೆಹಲಿ (ಪಿಟಿಐ): ಭಾರತದ 16 ವರ್ಷದೊಳಗಿನವರ ಬಾಲಕರ ತಂಡ ಇರಾನ್‌ನ ತೆಹ್ರಾನ್‌ನಲ್ಲಿ ಬುಧವಾರ ಆರಂಭವಾಗಲಿರುವ ಫಿಬಾ ಏಷ್ಯಾ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಜೋರ್ಡಾನ್‌ ಸವಾಲು ಎದುರಿಸಲಿದೆ.ಭಾರತ ತಂಡ ಸೆಪ್ಟೆಂಬರ್‌ 15ರಿಂದ 22ರ ವರೆಗೆ ಚೀನಾದಲ್ಲಿ ತರಬೇತಿ ಪಡೆದಿದೆ. ಜೊತೆಗೆ ಚೀನಾದ ಹಲವು ಕ್ಲಬ್‌ಗಳ ವಿರುದ್ಧ ಪಂದ್ಯವನ್ನೂ ಆಡಿದೆ. ಆದ್ದರಿಂದ ಭಾರತ ಮೊದಲ ಪೈಪೋಟಿ­ಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ಹೊಂದಿದೆ. ಅಕ್ಟೋಬರ್‌ ನಾಲ್ಕರವರೆಗೆ ಈ ಟೂರ್ನಿ ನಡೆಯ­ಲಿದೆ. ಒಟ್ಟು 14 ತಂಡಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸಲಿದ್ದು, ಪ್ರಾಥಮಿಕ ಸುತ್ತಿನಲ್ಲಿ ನಾಲ್ಕು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಭಾರತ ‘ಸಿ’ ಗುಂಪಿನಲ್ಲಿ ಸ್ಥಾನದಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry