ಸೋಮವಾರ, ಜೂನ್ 21, 2021
28 °C

ಬ್ಯಾಸ್ಕೆಟ್‌ಬಾಲ್‌ ಲೀಗ್‌: ಎಂವಿಐಟಿ ತಂಡಕ್ಕೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಂವಿಐಟಿ ತಂಡದವರು ಇಲ್ಲಿ ನಡೆಯುತ್ತಿರುವ ಬಿಎಫ್‌ಐ ಆಶ್ರಯದ ರಾಜ್ಯ ಕಾಲೇಜ್‌ ಬ್ಯಾಸ್ಕೆಟ್‌ಬಾಲ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಜಯ ಗಳಿಸಿದ್ದಾರೆ.ಸೇಂಟ್‌ ಜೋಸೆಫ್‌ ವಾಣಿಜ್ಯ ಕಾಲೇಜಿನ ಮೈದಾನದಲ್ಲಿ ಭಾನುವಾರ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ಎಂವಿಐಟಿ ತಂಡ 46–36 ಪಾಯಿಂಟ್‌ಗಳಿಂದ ಬಿಎಂಎಸ್‌ಸಿಇ ತಂಡವನ್ನು  ಮಣಿಸಿತು. ವಿಜಯೀ ತಂಡ ವಿರಾಮದ ವೇಳೆಗೆ 21–20 ಪಾಯಿಂಟ್‌ಗಳಿಂದ ಮುಂದಿತ್ತು. ನ್ಯೂ ಹೊರೈಜನ್‌ ಎಂಜಿನಿಯರಿಂಗ್‌ ತಂಡದವರು ರೋಜಕ ಹೋರಾಟಕ್ಕೆ ಕಾರಣವಾದ ಪಂದ್ಯದಲ್ಲಿ 64–57 ಪಾಯಿಂಟ್‌ಗಳಿಂದ ಪೆಸಿಟ್‌ ತಂಡವನ್ನು ಪರಾಭವಗೊಳಿಸಿದರು. ಹೊರೈಜನ್‌ ತಂಡ ವಿರಾಮದ ವೇಳೆಗೆ 39–27 ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿತ್ತು. ಮತ್ತೊಂದು ಪಂದ್ಯದಲ್ಲಿ ಸೇಂಟ್‌ ಜೋಸೆಫ್‌ ವಾಣಿಜ್ಯ ಕಾಲೇಜ್‌ 85–39 ಪಾಯಿಂಟ್‌ಗಳಿಂದ ಸಿಂಧಿ ಕಾಲೇಜ್‌ ಎದುರು ಗೆಲುವು ಸಾಧಿಸಿತು. ಮಹಿಳೆಯರ ವಿಭಾಗದ ಪಂದ್ಯದಲ್ಲಿ ಆರ್‌ವಿಸಿಇ 34–30 ರಲ್ಲಿ ಬಿಎಂಎಸ್‌ಇ ತಂಡವನ್ನು ಮಣಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.