ಬ್ಯಾಸ್ಕೆಟ್‌ಬಾಲ್: ಎಂಎಸ್‌ಆರ್‌ಐಟಿಗೆ ಜಯ

7

ಬ್ಯಾಸ್ಕೆಟ್‌ಬಾಲ್: ಎಂಎಸ್‌ಆರ್‌ಐಟಿಗೆ ಜಯ

Published:
Updated:

ಬೆಂಗಳೂರು: ಉತ್ತಮ ಪ್ರದರ್ಶನ ನೀಡಿದ ಆತಿಥೇಯ ಎಂಎಸ್‌ಆರ್‌ಐಟಿ ತಂಡದವರು ಇಲ್ಲಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ ಸ್ಮಾರಕ ಅಖಿಲ ಭಾರತ ಅಂತರ ಎಂಜಿನಿಯರಿಂಗ್ ಕಾಲೇಜ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ ಗೆಲುವು ಪಡೆದರು.ಶುಕ್ರವಾರ ನಡೆದ ಪಂದ್ಯದಲ್ಲಿ  ಎಂಎಸ್‌ಆರ್‌ಐಟಿ 34-28 ಪಾಯಿಂಟ್‌ಗಳಿಂದ ಆರ್‌ವಿಸಿಇ ತಂಡವನ್ನು ಸೋಲಿಸಿತು. ವಿಜಯಿ ತಂಡ ವಿರಾಮದ ವೇಳೆಗೆ 20-14ರಲ್ಲಿ ಮುನ್ನಡೆಯಲ್ಲಿತ್ತು. ನಂತರ ಗೆಲುವಿನ ಅಂತರ ಹೆಚ್ಚಿಸಿಕೊಂಡಿತು. ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಆರ್‌ವಿಸಿಇ 45-43ರಲ್ಲಿ ಆರ್‌ಎನ್‌ಎಸ್‌ಐಟಿ ಮೇಲೆ ಗೆದ್ದಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry