ಮಂಗಳವಾರ, ಮೇ 24, 2022
28 °C

ಬ್ಯಾಸ್ಕೆಟ್‌ಬಾಲ್: ಎಂಎಸ್‌ಆರ್‌ಐಟಿ ತಂಡಕ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊನೆಯ ಪಂದ್ಯದಲ್ಲಿ ಪ್ರಭಾವಿ ಆಟವಾಡಿದ ಆತಿಥೇಯ ಎಂಎಸ್‌ಆರ್‌ಐಟಿ ತಂಡದವರು ಇಲ್ಲಿ ಕೊನೆಗೊಂಡ ಎಂ.ಎಸ್. ರಾಮಯ್ಯ ಸ್ಮಾರಕ ಅಖಿಲ ಭಾರತ ಅಂತರ ಎಂಜಿನಿಯರಿಂಗ್ ಕಾಲೇಜ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಎಂಎಸ್‌ಆರ್‌ಐಟಿ 39-25 ಪಾಯಿಂಟ್‌ಗಳಿಂದ ಮಣಿಪಾಲದ ಎಂಐಟಿ ತಂಡವನ್ನು ಸೋಲಿಸಿತು. ವಿಜಯಿ ತಂಡ ವಿರಾಮದ ವೇಳೆಗೆ 20-14ರಲ್ಲಿ ಮುನ್ನಡೆಯಲ್ಲಿತ್ತು. ನಂತರ ಪಾಯಿಂಟ್ಸ್‌ಗಳ ಸಂಖ್ಯೆ ಹೆಚ್ಚಿಸಿಕೊಂಡಿತು. ಆತಿಥೇಯ ತಂಡದ ವಿಜಯ್ (12) ಹಾಗೂ ಆನಂದ್ (10) ಪ್ರಭಾವಿ ಆಟವಾಡಿದರು.ಬಾಲಕಿಯರ ವಿಭಾಗದಲ್ಲಿಯು ಮಿಂಚಿನ ಆಟವಾಡಿದ ಎಂಎಸ್‌ಆರ್‌ಐಟಿ ತಂಡದವರು ಫೈನಲ್ ಪಂದ್ಯದಲ್ಲಿ 25-21ಪಾಯಿಂಟ್‌ಗಳಿಂದ ಎನ್‌ಎಚ್‌ಸಿಇ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.