ಬ್ಯಾಸ್ಕೆಟ್‌ಬಾಲ್: ಕನಕ ತಂಡಕ್ಕೆ ಜಯ

7

ಬ್ಯಾಸ್ಕೆಟ್‌ಬಾಲ್: ಕನಕ ತಂಡಕ್ಕೆ ಜಯ

Published:
Updated:

ಶಿವಮೊಗ್ಗ: ಕೋಲಾರದ ಕನಕ ತಂಡ ಶಿವಮೊಗ್ಗ ಯೂತ್ಸ್ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬುಧವಾರದ ಪಂದ್ಯದಲ್ಲಿ 36-24 ಪಾಯಿಂಟ್‌ಗಳಿಂದ ಸಹಕಾರ ನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡವನ್ನು ಮಣಿಸಿತು.ವಿಜಯಿ ತಂಡ ವಿರಾಮದ ವೇಳೆಗೆ 20-13ರಲ್ಲಿ ಮುನ್ನಡೆ ಸಾಧಿಸಿತ್ತು. ಕನಕ ತಂಡದ ಗುರುಪ್ರಸಾದ್ (13) ಪಾಯಿಂಟ್ ಗಳಿಸಿ ಗಮನ ಸೆಳೆದರು.ದಿನದ ಇತರ ಪಂದ್ಯಗಳಲ್ಲಿ ಎಸ್‌ಬಿಐ 40-15ರಲ್ಲಿ ಬಾಷ್ ಮೇಲೂ, ಯಂಗ್ ಓರಿಯನ್ಸ್ 64-37ರಲ್ಲಿ ಶಿವಮೊಗ್ಗ ಯೂತ್ಸ್ ವಿರುದ್ಧವೂ, ಬೆಂಗಳೂರಿನ ಸ್ಪೋರ್ಟ್ಸ್ ಹಾಸ್ಟೆಲ್ 41-22ರಲ್ಲಿ ವಿಮನಾಪುರ ಸ್ಪೋರ್ಟ್ಸ್ ಕ್ಲಬ್ ಮೇಲೂ, ಧಾರವಾಡದ ರೋವರ್ಸ್ 35-28ರಲ್ಲಿ ಪಟ್ಟಾಭಿರಾಮನಗರ ಕ್ಲಬ್ ವಿರುದ್ಧವೂ ಜಯ ಸಾಧಿಸಿತು.ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ 40-16ರಲ್ಲಿ ಎನ್‌ಜಿವಿ ಕ್ಲಬ್ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry