ಬ್ಯಾಸ್ಕೆಟ್‌ಬಾಲ್: ಕರ್ನಾಟಕಕ್ಕೆ ಗೆಲುವು

7

ಬ್ಯಾಸ್ಕೆಟ್‌ಬಾಲ್: ಕರ್ನಾಟಕಕ್ಕೆ ಗೆಲುವು

Published:
Updated:

ಬೆಂಗಳೂರು: ಸಂಧ್ಯಾ (12 ಪಾಯಿಂಟ್ಸ್) ಅವರ ಚುರುಕಿನ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡದವರು ಗೋವಾದಲ್ಲಿ ನಡೆಯುತ್ತಿರುವ 39ನೇ ಸಬ್ ಜೂನಿಯರ್ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕಿಯರ ವಿಭಾಗದಲ್ಲಿ ಗೆಲುವು ಸಾಧಿಸಿದ್ದಾರೆ.ಮಂಗಳವಾರ ನಡೆದ ಮೂರನೇ ಲೀಗ್ ಪಂದ್ಯದಲ್ಲಿ ಕರ್ನಾಟಕ 40-22 ಪಾಯಿಂಟ್‌ಗಳಿಂದ ಕೇರಳ ತಂಡವನ್ನು ಮಣಿಸಿತು. ವಿಜಯಿ ತಂಡದವರು ವಿರಾಮದ ವೇಳೆಗೆ 29-20 ಪಾಯಿಂಟ್‌ಗಳಿಂದ ಮುಂದಿದ್ದರು.ಕರ್ನಾಟಕ ಮೊದಲ ಪಂದ್ಯದಲ್ಲಿ ಪಶ್ಚಿಮ ಬಂಗಾಳ ಎದುರು ಗೆದ್ದಿತ್ತು. ಆದರೆ ಎರಡನೇ ಪಂದ್ಯದಲ್ಲಿ ಮಧ್ಯಪ್ರದೇಶ ವಿರುದ್ಧ ಪರಾಭವಗೊಂಡಿತ್ತು. ನಾಕ್‌ಔಟ್ ಹಂತ ಪ್ರವೇಶಿಸುವ ಮುನ್ನ ಮೇ 10ರಂದು ಕರ್ನಾಟಕ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ತಮಿಳುನಾಡು ಎದುರು ಆಡಲಿದೆ ಎಂದು ಇಲ್ಲಿಗೆ ಬಂದಿರುವ ವರದಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry