ಬ್ಯಾಸ್ಕೆಟ್‌ಬಾಲ್: ಕರ್ನಾಟಕ ತಂಡಕ್ಕೆ ಸೋಲು

7

ಬ್ಯಾಸ್ಕೆಟ್‌ಬಾಲ್: ಕರ್ನಾಟಕ ತಂಡಕ್ಕೆ ಸೋಲು

Published:
Updated:

ರಾಂಚಿ: ಕರ್ನಾಟಕ ಪುರುಷರ ಮತ್ತು ಮಹಿಳೆಯರ ತಂಡದವರು 34ನೇ ರಾಷ್ಟ್ರೀಯ ಕ್ರೀಡಾಕೂಟದ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪಂದ್ಯಗಳಲ್ಲಿ ಸೋಲು ಅನುಭವಿಸಿದರು.ಹರಿವಂಶ್ ಭಗತ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಉತ್ತರಾಖಂಡ್ 82-79 ಪಾಯಿಂಟ್‌ಗಳಿಂದ ಕರ್ನಾಟಕ ವಿರುದ್ಧ ರೋಚಕ ಗೆಲುವು ಪಡೆಯಿತು.ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ಮೋಹಿತ್ ಭಂಡಾರಿ ಅವರು 34 ಪಾಯಿಂಟ್ ಕಲೆಹಾಕಿ ಉತ್ತರಾಖಂಡ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ರಿಯಾಜುದ್ದೀನ್ 17 ಪಾಯಿಂಟ್‌ಗಳನ್ನು ತಂದಿತ್ತರು.ತಲಾ 20 ಪಾಯಿಂಟ್ ತಂದಿತ್ತ ಎ. ಅರವಿಂದ್ ಮತ್ತು ಶ್ರೀನಿವಾಸ್ ನಾಯ್ಕೀ ಅವರು ಕರ್ನಾಟಕ ತಂಡದ ಗೆಲುವಿಗಾಗಿ ಕಠಿಣ ಪ್ರಯತ್ನ ನಡೆಸಿದರಾದರೂ ಯಶ ಕಾಣಲಿಲ್ಲ.

ರಾಜ್ಯದ ಮಹಿಳಾ ತಂಡದವರೂ ನಿರಾಸೆ ಅನುಭವಿಸಿದರು. ‘ಬಿ’ ಗುಂಪಿನ ಪಂದ್ಯದಲ್ಲಿ ಛತ್ತೀಸ್‌ಗಡ ತಂಡ 71-40 ರಲ್ಲಿ ಕರ್ನಾಟಕ ವಿರುದ್ಧ ಜಯ ಸಾಧಿಸಿತು. ಎಂ. ಪುಷ್ಪಾ (15) ಅವರು ಛತ್ತೀಸ್‌ಗಡ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry