ಗುರುವಾರ , ಜೂನ್ 24, 2021
29 °C

ಬ್ಯಾಸ್ಕೆಟ್‌ಬಾಲ್: ಕೆಎಸ್‌ಪಿ ತಂಡಕ್ಕೆ ರೋಚಕ ವಿಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ತಂಡದವರು ಇಲ್ಲಿ ನಡೆಯುತ್ತಿರುವ ಪ್ರೊ. ಎನ್.ಸಿ. ಪರಪ್ಪ ಸ್ಮಾರಕ `ಎ~ ಡಿವಿಷನ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೆಎಸ್‌ಪಿ 66-62 ಪಾಯಿಂಟ್‌ಗಳಿಂದ ಎಂಇಜಿ ತಂಡವನ್ನು ಸೋಲಿಸಿತು. ವಿಜಯಿ ತಂಡ ವಿರಾಮದ   ವೇಳೆಗೆ 36-32ರಲ್ಲಿ ಮುನ್ನಡೆ ಹೊಂದಿತ್ತು.ಕೆಎಸ್‌ಪಿ ತಂಡದ ರಾಮಕೃಷ್ಣ 20 ಹಾಗೂ ಸಂತೋಷ 16 ಪಾಯಿಂಟ್‌ಗಳನ್ನು ಗಳಿಸಿ ಗಮನ ಸೆಳೆದರು. ಎದುರಾಳಿ ತಂಡದ ಜೋಸೆಫ್ ಹಾಗೂ ಮಯೂರ್ ಕ್ರಮವಾಗಿ 19 ಮತ್ತು 18 ಪಾಯಿಂಟ್ ಗಳಿಸಿದರು.ವಿಜಯಾ ಬ್ಯಾಂಕ್ 85-36ರಲ್ಲಿ ಜೆಎಸ್‌ಸಿ ಎದುರು ಗೆಲುವು ಸಾಧಿಸಿತು. ವಿಜಯಿ ತಂಡದ ಸ್ಟಾಲಿನ್ (32) ಹಾಗೂ ಅಸ್ಟಿನ್ (17) ಗಳಿಸಿದರು. ವಿರಾಮದ ವೇಳೆಗೆ ವಿಜಯಾ ಬ್ಯಾಂಕ್ 34-15ರಲ್ಲಿ ಮುನ್ನಡೆ ಸಾಧಿಸಿತ್ತು.ಇತರ ಪಂದ್ಯಗಳಲ್ಲಿ ಸಿಎಂಪಿ 72-60ರಲ್ಲಿ (ವಿರಾಮದ ಸ್ಕೋರು 38-32) ಯಂಗ್ ಓರಿಯನ್ಸ್ ಮೇಲೂ, ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ 56-43ರಲ್ಲಿ (33-23) ಸದರ್ನ್ ಬ್ಲ್ಯೂಸ್ ವಿರುದ್ಧವೂ ಜಯ ಪಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.