ಬ್ಯಾಸ್ಕೆಟ್‌ಬಾಲ್: ಕ್ರೈಸ್ಟ್ ಶಾಲೆಗೆ ಜಯ

ಬುಧವಾರ, ಜೂಲೈ 17, 2019
26 °C

ಬ್ಯಾಸ್ಕೆಟ್‌ಬಾಲ್: ಕ್ರೈಸ್ಟ್ ಶಾಲೆಗೆ ಜಯ

Published:
Updated:

ಬೆಂಗಳೂರು: ಕ್ರೈಸ್ಟ್ ಶಾಲೆ ತಂಡದವರು ಬಿ.ಎಫ್.ಐ. ಆಶ್ರಯದ ಅಂತರ ಶಾಲಾ ಬ್ಯಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಬಾಲಕರ ವಿಭಾಗದ  ಪಂದ್ಯದಲ್ಲಿ ಕುಮಾರನ್ಸ್ ಚಿಲ್ಡ್ರನ್ಸ್ ಹೋಮ್ ವಿರುದ್ಧ 31-24 ರಲ್ಲಿ ಅರ್ಹ ಜಯ ಪಡೆದರು.ಇಂದಿರಾನಗರ ಪೂರ್ಣಪ್ರಜ್ಞ ಶಾಲೆ ಅಂಕಣದಲ್ಲಿ ಸೋಮವಾರ ನಡೆದ ಇದೇ ಚಾಂಪಿಯನ್‌ಷಿಪ್ ಲೀಗ್ ಇತರ ಪಂದ್ಯಗಳಲ್ಲಿ ಸೇಂಟ್ ಜೋಸೆಫ್ ಪ್ರೌಢ ಶಾಲೆ ತಂಡ 54-47 (ವಿರಾಮದ ಸ್ಕೋರು: 16-21) ರಲ್ಲಿ ನ್ಯಾಷನಲ್ ಪಬ್ಲಿಕ್ ಶಾಲೆ ಮೇಲೂ, ವಿದ್ಯಾನಿಕೇತನ ಶಾಲೆ ತಂಡ 38-12 (16-1) ರಲ್ಲಿ ಪೂರ್ಣ ಪ್ರಜ್ಞ ಶಾಲೆ ವಿರುದ್ಧವೂ, ಬಿಷಪ್ ಕಾಟನ್ ಬಾಲಕರ ಪ್ರೌಢ ಶಾಲೆ ತಂಡ 38-32 (20-21) ರಲ್ಲಿ ದೆಹಲಿ ಪಬ್ಲಿಕ್ ಶಾಲೆ ಮೇಲೂ ಗೆಲುವು ಸಾಧಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry