ಬ್ಯಾಸ್ಕೆಟ್‌ಬಾಲ್ ಟೂರ್ನಿ: ಆರ್‌ವಿ ಕಾಲೇಜಿಗೆ ಪ್ರಶಸ್ತಿ

7

ಬ್ಯಾಸ್ಕೆಟ್‌ಬಾಲ್ ಟೂರ್ನಿ: ಆರ್‌ವಿ ಕಾಲೇಜಿಗೆ ಪ್ರಶಸ್ತಿ

Published:
Updated:

ತುಮಕೂರು: ಬೆಂಗಳೂರು ಆರ್.ವಿ.ಎಂಜಿನಿಯರ್ ಕಾಲೇಜು ತಂಡದವರು ಇಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಅಂತರ ಕಾಲೇಜು ಮಹಿಳೆಯರ ಬ್ಯಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದರು. ನಗರದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್.ವಿ. ಕಾಲೇಜು 41-30ಪಾಯಿಂಟ್‌ಗಳಿಂದ ಬೆಂಗಳೂರಿನ ಬಿಎಂಎಸ್ ಎಂಜಿನಿಯರಿಂಗ್ ಮಣಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆರ್.ವಿ.ಕಾಲೇಜು ತಂಡ ಬೆಂಗಳೂರಿನ ಸಿಎಂಆರ್ ತಾಂತ್ರಿಕ ವಿದ್ಯಾಲಯವನ್ನು ಹಾಗೂ ಬಿಎಂಎಸ್ ತಾಂತ್ರಿಕ ಕಾಲೇಜು ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜು ತಂಡವನ್ನು ಸೋಲಿಸಿ ಅಂತಿಮ ಸುತ್ತಿಗೆ ಪ್ರವೇಶಿಸಿದವು.ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜು ತಂಡವು ಸಿಎಂಆರ್ ತಾಂತ್ರಿಕ ವಿದ್ಯಾಲಯ ವಿರುದ್ಧ ಗೆಲುವು ಸಾಧಿಸಿತು.ಫೈನಲ್‌ನಲ್ಲಿ ಮಧ್ಯಂತರ ಅವಧಿಯವರೆಗೆ ಸಮಬಲದಿಂದ ಕೂಡಿದ್ದ ಪಂದ್ಯದ ಮೇಲೆ ಆರ್.ವಿ. ಕಾಲೇಜು ತಂಡವು ಸಂಪೂರ್ಣ ಪ್ರಭುತ್ವ ಸಾಧಿಸಿ ಗೆಲುವು ಪಡೆಯಿತು. ರಾಜ್ಯದ ವಿವಿಧ ಭಾಗದ 16 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry