ಬ್ಯಾಸ್ಕೆಟ್‌ಬಾಲ್: ಪೊಲೀಸ್ ತಂಡಕ್ಕೆ ಜಯದ ಸಿಂಚನ

7

ಬ್ಯಾಸ್ಕೆಟ್‌ಬಾಲ್: ಪೊಲೀಸ್ ತಂಡಕ್ಕೆ ಜಯದ ಸಿಂಚನ

Published:
Updated:

ಶಿವಮೊಗ್ಗ: ಮಹೇಶ್ ಕಲೆ ಹಾಕಿದ 14 ಪಾಯಿಂಟ್‌ಗಳ ನೆರವಿನಿಂದ ಕರ್ನಾಟಕ ರಾಜ್ಯ ಪೊಲೀಸ್ ತಂಡ ಶಿವಮೊಗ್ಗ ಯೂತ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಗುರುವಾರದ ಪಂದ್ಯದಲ್ಲಿ 50-33ರಲ್ಲಿ ಗೌರಿಬಿದನೂರಿನ ಪಿನಾಕಿನಿ ತಂಡವನ್ನು ಸೋಲಿಸಿತು. ಪೊಲೀಸ್ ತಂಡ ವಿರಾಮದ ವೇಳೆಗೆ 29-23ರಲ್ಲಿ ಮುನ್ನಡೆ ಸಾಧಿಸಿತ್ತು.ದಿನದ ಇತರ ಪಂದ್ಯಗಳಲ್ಲಿ ಸಿಎಂಪಿ 54-38ರಲ್ಲಿ ಮಂಡ್ಯದ ವಿಬಿಸಿ ತಂಡದ ಮೇಲೂ, ವಿಜಯ ಬ್ಯಾಂಕ್ 45-18ರಲ್ಲಿ ದೇವಾಂಗ ಯೂನಿಯನ್ ಸ್ಪೋರ್ಟ್ಸ್ ಕ್ಲಬ್ ವಿರುದ್ಧವೂ, ಜಯನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ 41-36ರಲ್ಲಿ ಕೋಲಾರದ ಕನಕ ತಂಡದ ಮೇಲೂ, ಎಚ್‌ಎಎಸ್‌ಸಿ 44-23ರಲ್ಲಿ ಎಸ್‌ಬಿಐ ಮೇಲೂ, ಗೆಲುವು ಪಡೆದವು.ಬೀಗಲ್ಸ್ ಕ್ಲಬ್ 39-29ರಲ್ಲಿ ರಾಜಕುಮಾರ ಕ್ಲಬ್ ವಿರುದ್ಧವೂ ಜಯ ಸಾಧಿಸಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry