ಗುರುವಾರ , ಆಗಸ್ಟ್ 5, 2021
21 °C

ಬ್ಯಾಸ್ಕೆಟ್‌ಬಾಲ್: ಬೀಗಲ್ಸ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಶಾಂತ್ (16 ಪಾಯಿಂಟ್) ಅವರ ಪ್ರಭಾವಿ ಆಟದ ನೆರವಿನಿಂದ ಬೀಗಲ್ಸ್ ತಂಡ ಇಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಭಾನುವಾರದ ಪಂದ್ಯದಲ್ಲಿ ವಿಜಯ ಸಾಧಿಸಿತು.

ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬೀಗಲ್ಸ್ ತಂಡ 39-32ಪಾಯಿಂಟ್‌ಗಳಿಂದ ಎಸ್.ಪಿ. ಶಾಲೆಯನ್ನು ಮಣಿಸಿತು.

ಇತರ ಪಂದ್ಯಗಳಲ್ಲಿ ಯಂಗ್ ಒರಿಯನ್ಸ್ ತಂಡ 53-36ಪಾಯಿಂಟ್‌ಗಳಲ್ಲಿ ಮಂಡ್ಯದ ವಿವೇಕಾನಂದ ತಂಡದ ಮೇಲೂ, ವಿಎನ್‌ಎಸ್ ಕ್ಲಬ್ 58-18ಪಾಯಿಂಟ್‌ಗಳಲ್ಲಿ ಅಪ್ಪಯ್ಯ ಕ್ಲಬ್ ವಿರುದ್ಧವೂ ಗೆಲುವು ಪಡೆಯಿತು.

ಬಾಲಕಿಯರ ವಿಭಾಗದ ಪಂದ್ಯಗಳಲ್ಲಿ ವಿದ್ಯಾನಗರದ ಎಸ್.ಪಿ. ಶಾಲಾ ತಂಡವು 21-5ಪಾಯಿಂಟ್‌ಗಳಿಂದ ಭರತ್ ಎಸ್.ಯು. ತಂಡದ ಎದುರೂ, ಮಂಡ್ಯದ ಎಸ್.ಪಿ. ಶಾಲೆ ತಂಡವು 28-22ಪಾಯಿಂಟ್‌ಗಳಲ್ಲಿ ಮಂಗಳೂರಿನ ಎನ್. ಶೆಟ್ಟಿ ತಂಡದ ಮೇಲೂ  ಗೆದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.