ಸೋಮವಾರ, ಅಕ್ಟೋಬರ್ 21, 2019
25 °C

ಬ್ಯಾಸ್ಕೆಟ್‌ಬಾಲ್: ಬೆಂಗಳೂರಿಗೆ ಮುನ್ನಡೆ

Published:
Updated:

ಧಾರವಾಡ: ಬೆಂಗಳೂರಿನ ಬೀಗಲ್ಸ್ ಹಾಗೂ ಮಂಡ್ಯದ ವಿವೇಕಾನಂದ ಕ್ಲಬ್ ತಂಡಗಳು ಇಲ್ಲಿಯ ರೋವರ್ಸ್‌ ಕ್ಲಬ್ ಅಂಕಣದಲ್ಲಿ ನಡೆದಿರುವ `ರೋವರ್ಸ್‌ ಕಪ್~ ರಾಜ್ಯಮಟ್ಟದ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ಪುರುಷರ ವಿಭಾಗದಲ್ಲಿ ಶುಕ್ರವಾರ ಶುಭಾರಂಭ ಮಾಡಿದವು.

ಬೀಗಲ್ಸ್ ತಂಡ 40-17 (8-5)ರಿಂದ ತನ್ನದೇ ನಗರದ ಕ್ರೀಡಾ ಹಾಸ್ಟೆಲ್ ತಂಡದ ವಿರುದ್ಧ ಜಯಿಸಿದರೆ, ಮಂಡ್ಯ ತಂಡ 41-18 (11-11)ರಿಂದ ಭಾರತ ಕ್ರೀಡಾ ಒಕ್ಕೂಟ ತಂಡವನ್ನು ಪರಾಭವಗೊಳಿಸಿತು.

ಇತರ ಪಂದ್ಯಗಳಲ್ಲಿ ಡಿವೈಎಸ್‌ಎಸ್ ಕ್ರೀಡಾ ಹಾಸ್ಟೆಲ್ ತಂಡ 50-42 (16-14)ರಿಂದ ಕೋಲಾರದ ಕನಕ ತಂಡದ ಮೇಲೂ; ವಿದ್ಯಾನಗರ ತಂಡ 23-14 (18-5)ರಿಂದ ಬೆಂಗಳೂರಿನ ಎನ್‌ಪಿಎಸ್ ತಂಡದ ವಿರುದ್ಧವೂ; ಧಾರವಾಡದ ಸಾಯ್ ಕ್ರೀಡಾ ಹಾಸ್ಟೆಲ್ ತಂಡ 39-38 (13-4)ರಿಂದ ರೋವರ್ಸ್‌ ಕ್ಲಬ್ `ಬಿ~ ತಂಡದ ಮೇಲೂ ಜಯ ಸಾಧಿಸಿದವು. ಮಹಿಳೆಯರ ವಿಭಾಗದಲ್ಲಿ ಬೆಂಗಳೂರಿನ ಬೀಗಲ್ಸ್ ತಂಡ 33-12 (12-2)ರಿಂದ ಮಂಡ್ಯದ ಡಿವೈಎಸ್‌ಎಸ್ ತಂಡವನ್ನು ಪರಾಭವಗೊಳಿಸಿತು.

ಬಾಲಕರ ವಿಭಾಗದ ಲೀಗ್ ಪಂದ್ಯಗಳಲ್ಲಿ ಧಾರವಾಡದ ಬಾಸೆಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲಾ ತಂಡ 47-44 (13-17)ರಿಂದ ಲೌರ್ಡರ್ಡ್ ಬಾಲಕರ ಶಾಲಾ ತಂಡವನ್ನು; ಬಳ್ಳಾರಿಯ ನಂದಿ ಶಾಲೆ 18-17 (2-2)ರಿಂದ ಹುಬ್ಬಳ್ಳಿಯ ಸೇಂಟ್ ಜೋಸೆಫ್ ತಂಡವನ್ನು; ಬೆಂಗಳೂರಿನ ಎಚ್‌ಟಿಕೆಪಿ ತಂಡ 26-24 (7-7)ರಿಂದ ಉಡುಪಿಯ ಲಿಟಲ್ ರಾಕ್ ಶಾಲಾ ತಂಡವನ್ನು; ಹುಬ್ಬಳ್ಳಿಯ ಸೇಂಟ್ ಮೈಕೆಲ್ ಶಾಲಾ ತಂಡ 21-6 (9-4)ರಿಂದ ಗುರು `ಬಿ~ ತಂಡವನ್ನು ಪರಾಭವಗೊಳಿಸಿದವು.

ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಎನ್‌ಪಿಎಸ್ 25-19 (8-4)ರಿಂದ ಕಿತ್ತೂರಿನ ಸೈನಿಕ ಶಾಲಾ ತಂಡದ ವಿರುದ್ಧ ಜಯ ಸಾಧಿಸಿತು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)