ಬ್ಯಾಸ್ಕೆಟ್‌ಬಾಲ್: ಭಾರತ ತಂಡ ಶುಭಾರಂಭ

7

ಬ್ಯಾಸ್ಕೆಟ್‌ಬಾಲ್: ಭಾರತ ತಂಡ ಶುಭಾರಂಭ

Published:
Updated:

ನವದೆಹಲಿ (ಪಿಟಿಐ): ಪಂದ್ಯದುದ್ದಕ್ಕೂ ತೀವ್ರ ಪೈಪೋಟಿ ಎದುರಾದರೂ ಭಾರತ ತಂಡದವರು ಇಲ್ಲಿ ಆರಂಭವಾದ 18 ವರ್ಷದೊಳಗಿನವರ ಎಫ್‌ಐಬಿಎ ಏಷ್ಯನ್ ಬ್ಯಾಸ್ಕೆಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್ ಅರ್ಹತಾ ಟೂರ್ನಿಯ ಪಂದ್ಯದಲ್ಲಿ ಗೆಲುವು ಪಡೆದರು.ಇಲ್ಲಿನ ತ್ಯಾಗರಾಜ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ 93-45ಪಾಯಿಂಟ್‌ಗಳಿಂದ ಶ್ರೀಲಂಕಾ ತಂಡವನ್ನು ಪರಾಭವಗೊಳಿಸಿತು.ಆರಂಭದಿಂದ ಉತ್ತಮ ಪ್ರದರ್ಶನ ನೀಡಿದ ಅತಿಥೇಯ ಭಾರತ ತಂಡದ ಪ್ರದರ್ಶನ ಮಧ್ಯದಲ್ಲಿ ಮುಸುಕಾಯಿತು.ಉತ್ತಮ ಆರಂಭ ಪಡೆದ ಆತಿಥೇಯರು 26-6ಪಾಯಿಂಟುಗಳಲ್ಲಿ ಮುನ್ನಡೆ ಹೊಂದಿದ್ದರು. ನಂತರ ಎದುರಾಳಿ ಲಂಕಾ ಒಡ್ಡಿದ ಪ್ರಬಲ ಪೈಪೋಟಿಗೆ ತಕ್ಕಂತೆ ಆಡಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಈ ಪರಿಣಾಮವಾಗಿ ಲಂಕಾ 21-17ರಲ್ಲಿ ಮುನ್ನಡೆ ಸಾಧಿಸಿತು.ವಿರಾಮದ ನಂತರ ಕೆಲ ಹೊತ್ತಿನಲ್ಲಿಯೇ ಪ್ರಾಬಲ್ಯ ಮೆರೆದ ಭಾರತ ಚುರುಕಿನ ಆಟವಾಡಿ ಎದುರಾಳಿ ತಂಡಕ್ಕೆ ತಿರುಗೇಟು ನೀಡಿತು.  ಈ ಪರಿಣಾಮ ಭಾರತ ಕೊನೆಗೂ ಗೆಲುವು ತನ್ನದಾಗಿಸಿಕೊಂಡಿತು.ವಿಜಯಿ ತಂಡದ ಪರ ರಾಕೇಶ್ 18 ಹಾಗೂ ಲವನೀತ್ ಸಿಂಗ್ 15 ಪಾಯಿಂಟ್ ಕಲೆ ಹಾಕಿದರು. ಇನ್ನೊಂದು ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶ 78-54ರಲ್ಲಿ ನೇಪಾಳ ತಂಡವನ್ನು ಸೋಲಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry