ಬ್ಯಾಸ್ಕೆಟ್‌ಬಾಲ್: ಮೌಂಟ್ಸ್‌ಕ್ಲಬ್‌ಗೆ ಗೆಲುವು

7

ಬ್ಯಾಸ್ಕೆಟ್‌ಬಾಲ್: ಮೌಂಟ್ಸ್‌ಕ್ಲಬ್‌ಗೆ ಗೆಲುವು

Published:
Updated:

ಬೆಂಗಳೂರು: ಮೌಂಟ್ಸ್ ಕ್ಲಬ್ ತಂಡದವರು ಶಿವಮೊಗ್ಗ ಯೂತ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಮಹಿಳಾ ವಿಭಾಗದ ಪಂದ್ಯದಲ್ಲಿ ಶುಕ್ರವಾರ 36-14ರಲ್ಲಿ ದಕ್ಷಿಣ ಕನ್ನಡದ ನಿಟ್ಟೆಯ ಕೆ.ಎಸ್. ಹೆಗ್ಡೆ ಕ್ಲಬ್ ತಂಡವನ್ನು ಮಣಿಸಿದರು.ಇದೇ ವಿಭಾಗದ ಇನ್ನೊಂದು ಪಂದ್ಯದಲ್ಲಿ ಬೆಂಗಳೂರಿನ ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ತಂಡ (ಐಬಿಸಿಸಿ) 47-30ರಲ್ಲಿ ಬೀಗಲ್ಸ್ ಕ್ಲಬ್ ವಿರುದ್ಧ ಗೆಲುವು ಪಡೆಯಿತು.ಪುರುಷರ ವಿಭಾಗದ ಪಂದ್ಯಗಳಲ್ಲಿ ಜಯನಗರಬ್ಯಾಸ್ಕೆಟ್‌ಬಾಲ್ ಕ್ಲಬ್ 46-30ರಲ್ಲಿ ಧಾರವಾಡದ ರೋವರ್ಸ್‌ ವಿರುದ್ಧವೂ, ಬೆಂಗಳೂರಿನ ಸ್ಪೋರ್ಟ್ಸ್ ಹಾಸ್ಟೆಲ್ 64-44ರಲ್ಲಿ ಕರ್ನಾಟಕ ಪೊಲೀಸ್ ತಂಡ (ಕೆಎಸ್‌ಪಿ) ವಿರುದ್ಧವೂ ಜಯ ಸಾಧಿಸಿತು. 

  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry