ಸೋಮವಾರ, ಆಗಸ್ಟ್ 2, 2021
26 °C

ಬ್ಯಾಸ್ಕೆಟ್‌ಬಾಲ್: ರೋವರ್ಸ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಧಾರವಾಡದ ರೋವರ್ಸ್‌ ಕ್ಲಬ್ ತಂಡದವರು ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದ ಹದಿನಾರು ವರ್ಷ ವಯಸ್ಸಿನೊಳಗಿನವರ ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ಬಾಲಕರ ವಿಭಾಗದ ಬಾಲವೇಂದ್ರ ಸ್ಮಾರಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ರೋವರ್ಸ್‌ ತಂಡ 50-41 ರಲ್ಲಿ ಯಂಗ್ ಓರಿಯನ್ಸ್ ತಂಡವನ್ನು ಮಣಿಸಿದರು. ಉತ್ತಮ ಹೋರಾಟ ಕಂಡು ಬಂದ ಪಂದ್ಯದಲ್ಲಿ ವಿರಾಮದ ವೇಳೆಗೆ 28-25 ರಲ್ಲಿ ಮುಂದಿದ್ದ ರೋವರ್ಸ್‌ ತಂಡದ ಮೆಲ್ವರ್ (18) ಹಾಗೂ ಎದುರಾಳಿ ತಂಡದ ವರುಣ್ (11), ಆಕಾಶ್ (10) ಉತ್ತಮ ಗುರಿ ಎಸೆತದ ಆಟವಾಡಿದರು.

ಬಾಲಕಿಯರ ವಿಭಾಗದ ಎ.ವಿ. ಇಂಟರ್‌ನ್ಯಾಷನಲ್ ಪ್ರಶಸ್ತಿ ಬೆಂಗಳೂರಿನ ವಿದ್ಯಾನಗರ ಕ್ರೀಡಾ ಶಾಲೆ ತಂಡದ ಪಾಲಾಯಿತು. ಫೈನಲ್‌ನಲ್ಲಿ ಕ್ರೀಡಾ ಶಾಲೆ ತಂಡ 33-31 (ವಿರಾಮದ ಸ್ಕೋರು: 14-14) ರಲ್ಲಿ ಬೆಂಗಳೂರಿನ ಮೌಂಟ್ಸ್ ಕ್ಲಬ್ ವಿರುದ್ಧ ರೋಮಾಂಚಕ ವಿಜಯ ಸಾಧಿಸಿತು.

ದಾಳಿಗೆ ಪ್ರತಿದಾಳಿ ನಡೆಸಿದ ಕ್ರೀಡಾ ಶಾಲೆ ತಂಡದ ಗೊಮೆದಾ (14), ಪ್ರಣೀತಾ (11) ಹಾಗೂ ಎದುರಾಳಿ ತಂಡದ ಐಶ್ವರ್ಯ (9) ಅತ್ಯುತ್ತಮ ಆಟದ ಪ್ರದರ್ಶನ ತೋರಿ ಪ್ರೇಕ್ಷಕರ ಮನಗೆದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.