ಬ್ಯಾಸ್ಕೆಟ್‌ಬಾಲ್: ಸಿಎಂಪಿ ತಂಡಕ್ಕೆ ಮಣಿದ ಎಚ್‌ಎಎಲ್

7

ಬ್ಯಾಸ್ಕೆಟ್‌ಬಾಲ್: ಸಿಎಂಪಿ ತಂಡಕ್ಕೆ ಮಣಿದ ಎಚ್‌ಎಎಲ್

Published:
Updated:

ಬೆಂಗಳೂರು: ಸಿಎಂಪಿ ತಂಡದವರು ಇಲ್ಲಿ ನಡೆಯುತ್ತಿರುವ ಪ್ರೊ. ಎನ್.ಸಿ. ಪರಪ್ಪ ಸ್ಮಾರಕ ಟ್ರೋಫಿ ರಾಜ್ಯ `ಎ~ ಡಿವಿಷನ್ ಲೀಗ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಪಡೆದರು.ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್‌ಬಾಲ್ ಕೋರ್ಟ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಸಿಎಂಪಿ 70-68 ಪಾಯಿಂಟ್‌ಗಳಿಂದ ಎಚ್‌ಎಎಲ್    ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿತು. ವಿರಾಮದ ವೇಳೆಗೆ ವಿಜಯಿ ತಂಡದವರು 39-24 ರಲ್ಲಿ ಮುನ್ನಡೆ ಪಡೆದಿದ್ದರು.ಇನ್ನೊಂದು ಪಂದ್ಯದಲ್ಲಿ ವಿಜಯ ಬ್ಯಾಂಕ್ 53-36 ರಲ್ಲಿ ಭಾರತ್ ಸ್ಪೋರ್ಟ್ಸ್ ಯೂನಿಯನ್ ವಿರುದ್ಧ ಗೆಲುವು ಪಡೆಯಿತು. ಅರವಿಂದ್ (14) ಮತ್ತು ಶ್ರೀನಿವಾಸ ನಾಯ್ಕ (12) ಬ್ಯಾಂಕ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದರು.ದಿನದ ಇತರ ಪಂದ್ಯಗಳಲ್ಲಿ ಎಂಇಜಿ ಮತ್ತು ಸೆಂಟರ್ 33-22 ರಲ್ಲಿ ಮಂಡ್ಯದ ವಿಬಿಸಿ ಎದುರೂ, ಎಎಸ್‌ಸಿ ಮತ್ತು ಸೆಂಟರ್ 35-26 ರಲ್ಲಿ ಕೋರಮಂಗಲ ಸ್ಪೋರ್ಟ್ಸ್ ಕ್ಲಬ್ ವಿರುದ್ಧವೂ ಗೆಲುವು ಪಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry