ಬುಧವಾರ, ಮೇ 25, 2022
29 °C

ಬ್ಯಾಸ್ಕೆಟ್‌ಬಾಲ್: ಸೆಮಿಫೈನಲ್‌ಗೆ ಎಂಎಸ್‌ಆರ್‌ಐಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆತಿಥೇಯ ಎಂಎಸ್‌ಆರ್‌ಐಟಿ, ಆರ್‌ಎನ್‌ಎಸ್‌ಐಟಿ, ಆರ್‌ವಿಸಿಇ ಹಾಗೂ ಮಣಿಪಾಲದ ಎಂಐಟಿ ತಂಡದವರು ಇಲ್ಲಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ ಸ್ಮಾರಕ ಅಖಿಲ ಭಾರತ ಅಂತರ ಎಂಜಿನಿಯರಿಂಗ್ ಕಾಲೇಜ್ ಬ್ಯಾಸ್ಕೆಟ್‌ಬಾಲ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪಂದ್ಯಗಳಲ್ಲಿ ಎಂಎಸ್‌ಆರ್‌ಐಟಿ ತಂಡ 28-3ರಲ್ಲಿ ಆರ್‌ಎನ್‌ಎಸ್‌ಐಟಿ ತಂಡವನ್ನು ಸೋಲಿಸಿತು. ವಿಜಯಿ ತಂಡದ ಅಪೂರ್ವ ಹಾಗೂ ಕೀರ್ತನಾ ಕ್ರಮವಾಗಿ 11 ಹಾಗೂ 8 ಪಾಯಿಂಟ್ ಕಲೆ ಹಾಕಿ ಗಮನ ಸೆಳೆದರು.  ಇನ್ನೊಂದು ಪಂದ್ಯದಲ್ಲಿ ಅಮೃತಾ ತಂಡ 23-13ರಲ್ಲಿ ನ್ಯೂ ಹೊರೈಜನ್ ಎದುರು ಜಯ ಪಡೆಯಿತು.

ಬಾಲಕರ ವಿಭಾಗದಲ್ಲಿ ಆರ್‌ವಿಸಿಎ 59-48ರಲ್ಲಿ ಎಂವಿಐಟಿ ಮೇಲೂ, ಎಂಎಸ್‌ಆರ್‌ಐಟಿ 26-7ರಲ್ಲಿ ಜಿಎಟಿ ವಿರುದ್ಧವೂ, ಆರ್‌ಎನ್‌ಎಸ್‌ಐಟಿ 48-35ರಲ್ಲಿ ಅಮೃತಾ ತಂಡದ ವಿರುದ್ಧವೂ ಗೆಲುವು ಪಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.