ಬ್ಯಾಸ್ಕೆಟ್‌ಬಾಲ್: ಸೆಮಿಫೈನಲ್‌ಗೆ ಬೀಗಲ್ಸ್

7

ಬ್ಯಾಸ್ಕೆಟ್‌ಬಾಲ್: ಸೆಮಿಫೈನಲ್‌ಗೆ ಬೀಗಲ್ಸ್

Published:
Updated:

ಶಿವಮೊಗ್ಗ: ಬೀಗಲ್ಸ್ ತಂಡದವರು ಶಿವಮೊಗ್ಗ ಯೂತ್ಸ್ ಆಶ್ರಯದಲ್ಲಿ ನಡೆಯುತ್ತಿರುವ ಅಸೋಸಿಯೇಷನ್ ಕಪ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಶನಿವಾರದ ಪಂದ್ಯದಲ್ಲಿ 84-77ರಲ್ಲಿ ಬಿಎಸ್‌ಎನ್‌ಎಲ್ ತಂಡವನ್ನು ಮಣಿಸುವ ಮೂಲಕ ಪುರುಷರ ವಿಭಾಗದಿಂದ ಸೆಮಿಫೈನಲ್ ಪ್ರವೇಶಿಸಿದರು.ವಿಜಯಿ ತಂಡ ವಿರಾಮದ ವೇಳೆಗೆ 41-40 ಪಾಯಿಂಟ್‌ಗಳನ್ನು ಕಲೆ ಹಾಕಿತ್ತು. ಬೀಗಲ್ಸ್‌ನ ಚೇತನ್ 25 ಹಾಗೂ ಹೃಷಿಕೇಶ್ 21 ಪಾಯಿಂಟ್ ಗಳಿಸಿ ಗಮನ ಸೆಳೆದರು. ದಿನದ ಇತರ ಪಂದ್ಯಗಳಲ್ಲಿ ಎಂಇಜಿ 65-20ರಲ್ಲಿ ಜಯನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್ ಮೇಲೂ, ವಿಜಯಾ ಬ್ಯಾಂಕ್ 59-41ರಲ್ಲಿ ಎಚ್‌ಎಎಸ್‌ಸಿ ವಿರುದ್ಧವೂ, ಯಂಗ್ ಓರಿಯನ್ಸ್ 60-53ರಲ್ಲಿ ಬೆಂಗಳೂರಿನ     ಸ್ಪೋರ್ಟ್ಸ್ ಹಾಸ್ಟೆಲ್ ಮೇಲೂ ಜಯ ಸಾಧಿಸಿತು.ಪುರುಷರ ವಿಭಾಗದಲ್ಲಿ ವಿಜಯಾ ಬ್ಯಾಂಕ್, ಯಂಗ್ ಓರಿಯನ್ಸ್ ಮತ್ತು ಎಂಇಜಿ ತಂಡಗಳು ನಾಲ್ಕರ ಘಟ್ಟ ಪ್ರವೇಶಿಸಿದ ಇತರ ತಂಡಗಳಾಗಿವೆ. ಮಹಿಳೆಯರ ವಿಭಾಗದಿಂದ ಮೈಸೂರು ಕ್ರೀಡಾವಸತಿ ನಿಲಯ, ಇಂದಿರಾನಗರ ಬ್ಯಾಸ್ಕೆಟ್‌ಬಾಲ್ ಕ್ಲಬ್, ಮೌಂಟ್ಸ್ ಕ್ಲಬ್, ವಿವೇಕ್ಸ್ ತಂಡಗಳು ನಾಲ್ಕರ ಘಟ್ಟ ತಲುಪಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry