ಶುಕ್ರವಾರ, ನವೆಂಬರ್ 15, 2019
22 °C

ಬ್ಯಾಸ್ಕೆಟ್‌ಬಾಲ್: ಹಲಸೂರು ಕ್ಲಬ್ ಶುಭಾರಂಭ

Published:
Updated:

ಬೆಂಗಳೂರು: ಹಲಸೂರು   ಸ್ಪೋರ್ಟ್ಸ್ ಕ್ಲಬ್ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಆಶ್ರಯದಲ್ಲಿ ಆರಂಭವಾದ ರಾಜ್ಯ ಯೂತ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಶನಿವಾರದ ಪಂದ್ಯದಲ್ಲಿ 54-8 ಪಾಯಿಂಟ್‌ಗಳಿಂದ ಕೋಲಾರದ ವೈಎಫ್ ಕ್ಲಬ್ ಎದುರು ಗೆಲುವು ಸಾಧಿಸಿತು.ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಲಸೂರು ತಂಡದ ಸಾರ್ಥಕ್ (13 ಅಂಕ) ಹಾಗೂ ಚಾಣುಕ್ಯ (12 ಅಂಕ) ಗಳಿಸಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಪಿಪಿಸಿ ಕ್ಲಬ್ 37-31ರಲ್ಲಿ ಪಟ್ಟಾಭಿರಾಮ ನಗರ ಕ್ಲಬ್ ಮೇಲೂ, ಬಿ.ಸಿ. ಕ್ಲಬ್ 31-9ರಲ್ಲಿ ಕೋರಮಂಗಲ ಕ್ಲಬ್ ವಿರುದ್ಧವೂ, ವಿದ್ಯಾನಗರ ಕ್ರೀಡಾಶಾಲೆ 62-16ರಲ್ಲಿ ದೇವಾಂಗ ಸ್ಪೋರ್ಟ್ಸ್ ಕ್ಲಬ್ ಮೇಲೂ, ಬೆಂಗಳೂರು ಸ್ಪೋರ್ಟಿಂಗ್ 37-17ರಲ್ಲಿ ವೈಎಂಎಂಎ ಕ್ಲಬ್ ವಿರುದ್ಧವೂ, ಭಾರತ್ ಸ್ಪೋರ್ಟ್ಸ್ ಯುನೈಟೆಡ್ 36-10ರಲ್ಲಿ ವಿಮಾನಾಪುರ ಕ್ಲಬ್ ಮೇಲೂ ಗೆಲುವು ಪಡೆದರು.ಬಾಲಕಿಯರ ವಿಭಾಗದಲ್ಲೂ ಪ್ರಾಬಲ್ಯ ಮೆರೆದ ಹಲಸೂರು ತಂಡ 35-4ರಲ್ಲಿ ಕೋರಮಂಗಲ ಕ್ಲಬ್ ತಂಡವನ್ನು ಮಣಿಸಿತು. ವಿಜಯಿ ತಂಡ ಮೊದಲಾರ್ಧದ ವೇಳೆಗೆ 13-2ರಲ್ಲಿ ಮುನ್ನಡೆಯಲ್ಲಿತ್ತು. ಈ ತಂಡದ ಮಾಯಾ 12 ಅಂಕಗಳನ್ನು ಕಲೆ ಹಾಕಿ ಗಮನಾರ್ಹ ಪ್ರದರ್ಶನ ತೋರಿದರು.ಇದೇ ವಿಭಾಗದ ಇತರ ಪಂದ್ಯಗಳಲ್ಲಿ ವೈಎಂಎಂಎ ಕ್ಲಬ್ 28-18ರಲ್ಲಿ ಬೆಂಗಳೂರು ಸ್ಪೋರ್ಟಿಂಗ್ ಮೇಲೂ, ಅಪ್ಪಯ್ಯ ಕ್ಲಬ್ 26-14ರಲ್ಲಿ ಬಿ.ಸಿ. ಕ್ಲಬ್ ವಿರುದ್ಧವೂ, ವಿವೇಕ್ಸ್ ಸ್ಪೋರ್ಟ್ಸ್ ಕ್ಲಬ್ 26-13ರಲ್ಲಿ ಚಿತ್ರದುರ್ಗದ ದುರ್ಗನ್ಸ್ ಮೇಲೂ, ಧಾರವಾಡದ ರೋವರ್ಸ್‌ 11-8ರಲ್ಲಿ ಸಿಜೆಸಿ ವಿರುದ್ಧವೂ ಜಯ ಸಾಧಿಸಿದವು.

ಪ್ರತಿಕ್ರಿಯಿಸಿ (+)