ಬ್ಯುಲಾ ತಪ್ಪೊಪ್ಪಿಗೆ

7

ಬ್ಯುಲಾ ತಪ್ಪೊಪ್ಪಿಗೆ

Published:
Updated:

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಅತಿಕ್ರಮ ಪ್ರವೇಶ ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಬ್ಯುಲಾ ಎಂ. ಸ್ಯಾಮ್ (40) ಒಂಬತ್ತು ತಿಂಗಳ ಹಿಂದೆಯೇ ನಕಲಿ ಗುರುತಿನ ಚೀಟಿ ಪಡೆದಿದ್ದಾಗಿ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಒಂಬತ್ತು ತಿಂಗಳ ಹಿಂದೆಯೇ ಅಹಮದಾಬಾದ್‌ನಲ್ಲಿ ನಕಲಿ ಗುರುತಿನ ಚೀಟಿ ಪಡೆದು, ಅದನ್ನು ಕೇರಳದಲ್ಲಿ ಲ್ಯಾಮಿನೆಟ್ ಮಾಡಿಸಿದ್ದಾಗಿ ಬ್ಯುಲಾ ಹೇಳಿದ್ದಾರೆ. ಆದರೆ, `ತನ್ನ ಪತ್ನಿ ಗೂಡಾಚಾರಿ ಅಲ್ಲ. ಆಕೆ ಮಾನಸಿಕ ಅಸ್ವಸ್ಥೆ~ ಎಂದು ಬ್ಯುಲಾಳನ್ನು ಪತಿ ಸಮರ್ಥಿಸಿಕೊಳ್ಳುತ್ತಿದ್ದಾರೆ.ಈ ಮೊದಲು ಕೇರಳದ ಪುನಲೂರಿನಲ್ಲಿರುವ ಜನ ಸ್ಟುಡಿಯೊದಲ್ಲಿ ಗುರುತಿನ ಚೀಟಿ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.ಈ ಸಂಬಂಧ ಪೊಲೀಸರು ಜನ ಸ್ಟುಡಿಯೋದ ಮಾಲೀಕ ಸಿನಿ ಬಾಲನ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆದರೆ, `ಬಾಲನ್ ನಕಲಿ ಗುರುತಿನ ಚೀಟಿಯನ್ನು ಲ್ಯಾಮಿನೇಟ್ ಮಾಡಿ ಕೊಟ್ಟಿರುವುದು ಬಿಟ್ಟರೆ, ಪ್ರಕರಣಕ್ಕೆ ಬೇಕಾದ ಯಾವುದೇ ಮಾಹಿತಿ ಅವರಿಂದ ಸಿಕ್ಕಿಲ್ಲ~ ಎಂದು ಪೊಲೀಸರು ಹೇಳಿದ್ದಾರೆ.`ಅಹಮದಾಬಾದ್‌ನಲ್ಲಿ ನಟರಾಜ್ ಎಂಬುವರ ಔಷಧ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತಾನು, ತಂದೆಯ ಅಂತ್ಯಕ್ರಿಯೆಗಾಗಿ ಕೇರಳಕ್ಕೆ ಬಂದಿದ್ದೆ. ಸೆ. 14ರಂದು ಕೇರಳ ಬಸ್ ನಿಲ್ದಾಣದಲ್ಲಿ ಸ್ನೇಹಿತ ಅಂಥೋಣಿ ಥಾಮಸ್‌ನ ಪರಿಚಯವಾಯಿತು.ಇಸ್ರೊಗೆ ಬಿ.ಫಾರ್ಮ ಪದವೀಧರರ ಅಗತ್ಯವಿದೆ. ಹೀಗಾಗಿ ಉದ್ಯೋಗಕ್ಕೆ ಅರ್ಜಿ ಹಾಕು ಎಂದು ಅಂಥೋಣಿ ನನಗೆ ಹೇಳಿದ್ದರು. ಅಲ್ಲದೇ, ಸೆ.19ರಂದು ಇಸ್ರೊದ ಸಭೆಯಲ್ಲಿ ಹಾಜರಾಗುವಂತೆ ಅವರು ನನಗೆ ಸಲಹೆ ನೀಡಿದ್ದರು~ ಎಂದು ಬ್ಯುಲಾ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪೊಲೀಸರು ನಟರಾಜ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry