ಶನಿವಾರ, ಡಿಸೆಂಬರ್ 7, 2019
21 °C

ಬ್ರಯಾನ್‌ ಸಹೋದರರಿಗೆ ಆಘಾತ ನೀಡಿದ ಪೇಸ್‌–ಸ್ಟೆಪನೆಕ್‌

Published:
Updated:
ಬ್ರಯಾನ್‌ ಸಹೋದರರಿಗೆ ಆಘಾತ ನೀಡಿದ ಪೇಸ್‌–ಸ್ಟೆಪನೆಕ್‌

ನ್ಯೂಯಾರ್ಕ್‌ (ಪಿಟಿಐ): ಲಿಯಾಂಡರ್‌ ಪೇಸ್‌ ಹಾಗೂ ಜೆಕ್‌ ಗಣರಾಜ್ಯದ ರಾಡೆಕ್‌ ಸ್ಟೆಪನೆಕ್‌ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಡಬಲ್ಸ್‌ ವಿಭಾಗದ ಫೈನಲ್‌ ತಲುಪಿದ್ದಾರೆ.ಗುರುವಾರ ನಡೆದ ಸೆಮಿಫೈನಲ್‌ನಲ್ಲಿ ಪೇಸ್‌–ಸ್ಟೆಪನೆಕ್‌ 3–6, 6–3, 6–4ರಲ್ಲಿ ಅಮೆರಿಕದ ಮೈಕ್‌ ಹಾಗೂ ಬಾಬ್‌ ಬ್ರಯಾನ್‌ ಸಹೋದರರಿಗೆ ಆಘಾತ ನೀಡಿದರು.ಸತತ ನಾಲ್ಕನೇ ಗ್ರ್ಯಾಂಡ್‌ ಸ್ಲಾಮ್‌ ಡಬಲ್ಸ್‌ ಪ್ರಶಸ್ತಿ ಜಯಿಸುವ ಬ್ರಯಾನ್‌ ಸಹೋದರರ ಪ್ರಯತ್ನವನ್ನು ಪೇಸ್‌–ಸ್ಟೆಪನೆಕ್‌ ಅತ್ಯುತ್ತಮ ಆಟದ ಮೂಲಕ ವಿಫಲಗೊಳಿಸಿದರು. ಮೈಕ್‌–ಬಾಬ್‌ ಅಗ್ರಶ್ರೇಯಾಂಕದ ಆಟಗಾರರು.

ಪ್ರತಿಕ್ರಿಯಿಸಿ (+)