ಬುಧವಾರ, ನವೆಂಬರ್ 13, 2019
28 °C

ಬ್ರಸೆಲ್ಸ್‌ಗೆ ಆಫ್ಘನ್ ಅಧ್ಯಕ್ಷ ಕರ್ಜೈ ಭೇಟಿ

Published:
Updated:

ಕಾಬೂಲ್ (ಎಎಫ್‌ಪಿ): ಎಡವುತ್ತಾ ಸಾಗಿರುವ ಆಫ್ಘಾನಿಸ್ತಾನ ಶಾಂತಿ ಪ್ರಕ್ರಿಯೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಅಧ್ಯಕ್ಷ ಹಮೀದ್ ಕರ್ಜೈ ಅವರು ಅಮೆರಿಕ ಹಾಗೂ ಪಾಕಿಸ್ತಾನದ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಮಂಗಳವಾರ    ಬ್ರಸೆಲ್ಸ್‌ಗೆ ತೆರಳಿದರು.ಆಫ್ಘನ್ ಸರ್ಕಾರದೊಂದಿಗೆ ಕದನನಿರತರಾಗಿರುವ ತಾಲಿಬಾನ್ ಉಗ್ರರೊಂದಿಗೆ ಸಂಧಾನ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದ್ದ ಪಾಕಿಸ್ತಾನ, ಶಾಂತಿ ಮಾತುಕತೆಗೆ ಮತುವರ್ಜಿ ವಹಿಸದೇ ಇರುವುದರಿಂದ ತಮ್ಮ ದೇಶದ ಜನತೆ ಸಹನೆ ಕಳೆದುಕೊಳ್ಳುತ್ತಿದ್ದಾರೆ ಎಂದು ಕರ್ಜೈ ಕಚೇರಿಯ ವಕ್ತಾರ ಐಮಲ್ ಫೈಜಿ ಅಭಿಪ್ರಾಯಪಟ್ಟಿದ್ದಾರೆ.ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಅವರ ನೇತೃತ್ವದಲ್ಲಿ ಕರ್ಜೈ ಮತ್ತು ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಕಯಾನಿ ನಡುವೆ ಮಾತುಕತೆ ನಡೆಯಲಿದೆ. ಎರಡೂ ರಾಷ್ಟ್ರಗಳ ಹಿರಿಯ ಅಧಿಕಾರಿಗಳೂ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರತಿಕ್ರಿಯಿಸಿ (+)