ಶುಕ್ರವಾರ, ನವೆಂಬರ್ 22, 2019
19 °C

`ಬ್ರಹ್ಮಪುತ್ರಕ್ಕೆ ಚೀನಾ ಅಣೆಕಟ್ಟು: ಆತಂಕ ಬೇಡ'

Published:
Updated:

ನವದೆಹಲಿ: `ಬ್ರಹ್ಮಪುತ್ರ ನದಿಗೆ ಚೀನಾ ಮೂರು ಅಣೆಕಟ್ಟೆ ನಿರ್ಮಾಣ ಮಾಡುತ್ತಿರುವುದರಿಂದ ತೊಂದರೆ ಉಂಟಾಗುತ್ತದೆ ಎನ್ನುವುದು ಕೇವಲ ಭೀತಿ. ಯಾವುದೇ ತೊಂದರೆ ಇದರಿಂದ ಇಲ್ಲ' ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಹರೀಶ್ ರಾವುತ್ ಹೇಳಿದ್ದಾರೆ.  `ನಾವು ಬಳಸುವ ಬಹುತೇಕ ನದಿ ನೀರು ಅರುಣಾಚಲ ಪ್ರದೇಶದಿಂದ ಹರಿದು ಬರುವುದರಿಂದ  ಭಯವಿಲ್ಲ'  ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಈ ವಿಷಯವಾಗಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಚೀನಾದ ಅಧ್ಯಕ್ಷ ಜತೆ ಉನ್ನತ ಮಟ್ಟದ ಚರ್ಚೆ ನಡೆದಿದೆ ಎಂದು ರಾವುತ್ ತಿಳಿಸಿದ್ದಾರೆ.   `ನಮ್ಮಲ್ಲಿ ಹರಿಯುವ ಬ್ರಹ್ಮಪುತ್ರದ ನೀರಿನ ಮೂಲ ಬಹುತೇಕ ಅರುಣಾಚಲ ಪ್ರದೇಶ ಮತ್ತು ಇತರ ಸ್ಥಳಗಳಿಂದ' ಎಂದು ಮಾಧ್ಯಮಗಳಿಗೆ ತಿಳಿಸಿದ ಸಚಿವರು, ಇದೇ 8 ರಿಂದ 12 ರವರೆಗೆ ಜಲ ಸಪ್ತಾಹ ಆಚರಿಸಲಾಗುವುದು ಎಂದರು.

ಪ್ರತಿಕ್ರಿಯಿಸಿ (+)