ಬುಧವಾರ, ನವೆಂಬರ್ 20, 2019
20 °C

ಬ್ರಹ್ಮಪುತ್ರ ಪ್ರವಾಹ: ಲಕ್ಷ ಜನರಿಗೆ ತೊಂದರೆ

Published:
Updated:

ಗುವಾಹಟಿ (ಪಿಟಿಐ): ಬ್ರಹ್ಮಪುತ್ರ ಹಾಗೂ ಅದರ ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಸ್ಸಾಂನಲ್ಲಿ ಸುಮಾರು ಲಕ್ಷ ಜನ ಪ್ರವಾಹದಿಂದ ತೊಂದರೆಗೊಳಗಾಗಿದ್ದಾರೆ.ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಪ್ರವಾಹದಿಂದ ಜನ ತೊಂದರೆಗೊಳಗಾಗಿದ್ದಾರೆ. ಅದರಲ್ಲೂ ಧೆಮಜಿ ಜಿಲ್ಲೆ ಪ್ರವಾಹದಿಂದ ತತ್ತರಿಸಿದೆ.ಅಚ್ಚುಕಟ್ಟು ಪ್ರದೇಶ ಹಾಗೂ ನೆರೆಯ ಅರುಣಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಬ್ರಹ್ಮಪುತ್ರ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದ ಜತೆ ಮಣ್ಣಿನ ಸವಕಳಿಯಿಂದಲೂ ಅಪಾರ ಪ್ರಮಾಣದ ಭೂಮಿ ಹಾನಿಗೊಳಗಾಗಿದೆ.

ಪ್ರತಿಕ್ರಿಯಿಸಿ (+)