ಬ್ರಾರ್ ಮೇಲಿನ ದಾಳಿ ಹತ್ಯೆ ಯತ್ನ

7

ಬ್ರಾರ್ ಮೇಲಿನ ದಾಳಿ ಹತ್ಯೆ ಯತ್ನ

Published:
Updated:
ಬ್ರಾರ್ ಮೇಲಿನ ದಾಳಿ ಹತ್ಯೆ ಯತ್ನ

ಲಂಡನ್ (ಪಿಟಿಐ): ಭಾನುವಾರ ರಾತ್ರಿ ನಾಲ್ವರು ದುಷ್ಕರ್ಮಿಗಳಿಂದ ಇರಿತಕ್ಕೊಳಗಾದ ಬ್ಲೂಸ್ಟಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ನಿವೃತ್ತ ಲೆ.ಜ.ಕೆ.ಬ್ರಾರ್ ಅವರು ತಮ್ಮ ಮೇಲಿನ ಹಲ್ಲೆಯು ಖಾಲಿಸ್ತಾನ್ ಮೂಲಭೂತವಾದಿಗಳಿಂದ ನಡೆದ ಹತ್ಯೆಯ ಯತ್ನ ಎಂದು ಹೇಳಿದ್ದಾರೆ.ಸೋಮವಾರ ರಾತ್ರಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಬ್ರಾರ್ ಅವರು `ಇದೊಂದು ಶುದ್ದ ಹತ್ಯೆ ಯತ್ನವಾಗಿದ್ದು, ಇಲ್ಲಿಯವರೆಗೆ ನನಗೆ ಅಂತರಜಾಲ ಸೇರಿದಂತೆ ಅನೇಕ ಮೂಲಗಳಿಂದ ಹತ್ಯೆಯ ಬೆದರಿಕೆ ಕರೆಗಳು ಬಂದಿವೆ. ಇವರೆಗೆ ಅವರಿಗೆ ಯಶಸ್ಸು ಸಾಧಿಸಲು ಸಾಧ್ಯವಾಗಿಲ್ಲ. ಆದರೆ ಮುಂದೊಮ್ಮೆ ಆಗಬಹುದು~ ಎಂದು ಹೇಳಿದರು.ಬ್ರಾರ್ ಮತ್ತು ಅವರ ಪತ್ನಿ ಲಂಡನ್‌ಗೆ ಖಾಸಗಿ ಭೇಟಿ ನೀಡಿದ್ದು, ಹೈಡ್ ಪಾರ್ಕ್ ಪ್ರದೇಶದ ಹಳೆ ಕ್ಯುಬೆಕ್ ಬೀದಿಯಲ್ಲಿರುವ ಹೋಟೆಲ್‌ನಿಂದ ಹೊರಗೆ ಬರುತ್ತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿದರು. ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸ್ಕಾಟ್‌ಲೆಂಡ್ ಪೊಲೀಸರು ತಿಳಿಸಿದ್ದಾರೆ.ಹಲ್ಲೆಯಲ್ಲಿ ಗಾಯಗೊಂಡಿದ್ದ ಬ್ರಾರ್ ಅವರು ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು ಮಂಗಳವಾರ ಭಾರತಕ್ಕೆ ಮರಳಲಿದ್ದಾರೆ.

 

ಅಮೃತಸರದ ಸ್ವರ್ಣ ಮಂದಿರಲ್ಲಿ ಅವಿತಿದ್ದ ಸಿಖ್ ಭಯೋತ್ಪಾದಕರ ವಿರುದ್ದ 1984ರಲ್ಲಿ ನಡೆದ ಬ್ಲೂಸ್ಟಾರ್ ಕಾರ್ಯಾಚರಣೆಯ ನೇತೃತ್ವವನ್ನು ಲೆ.ಜ.ಕೆ.ಬ್ರಾರ್ ವಹಿಸಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry