ಬುಧವಾರ, ಅಕ್ಟೋಬರ್ 16, 2019
21 °C

ಬ್ರಿಟನ್ನಿನ ಅಲ್ಟ್ರಾ ಮೋಟಾರ್ಸ್ ಹೀರೊ ಇಕೊ ಸ್ವಾಧೀನಕ್ಕೆ

Published:
Updated:

ನವದೆಹಲಿ (ಪಿಟಿಐ): ವಿಜಯ್ ಮುಂಜಾಲ್ ನೇತೃತ್ವದ ಹೀರೊ ಇಕೊ ಸಂಸ್ಥೆಯು, ಬ್ರಿಟನ್ ಮೂಲದ ಅಲ್ಟ್ರಾ ಮೋಟಾರ್ಸ್ ಅನ್ನು ಖರೀದಿಸಿದೆ.ಹೀರೊ ಎಲೆಕ್ಟ್ರಿಕ್, ಹೀರೊ ಎಕ್ಸ್‌ಪೋರ್ಟ್ಸ್, ಮೆಡಿವಾ, ವಿನ್ ಮತ್ತು ಹೀರೊ ಇಕೊಟೆಕ್ ಸಂಸ್ಥೆಗಳೆಲ್ಲ ಸೇರಿಕೊಂಡು `ಹೀರೊ ಇಕೊ~ ಸಂಸ್ಥೆ ರಚಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ  ರೂ. 450 ಕೋಟಿಗಳಷ್ಟು ಬಂಡವಾಳ ಹೂಡಲಾಗುವುದು.ಒಂದೂವರೆ ವರ್ಷದಲ್ಲಿ ಉತ್ತರ ಅಮೆರಿಕದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ತಯಾರಿಸುವ ಘಟಕ ಸ್ಥಾಪಿಸಲಾಗುವುದು ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನವೀನ್ ಮುಂಜಾಲ್ ತಿಳಿಸಿದರು.ಅಲ್ಟ್ರಾ ಮೋಟಾರ್ಸ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಹೇಳಿದ ಮುಂಜಾಲ್ ಸ್ವಾಧೀನ ಮೊತ್ತ ಬಹಿರಂಗಪಡಿಸಲು ನಿರಾಕರಿಸಿದರು.

 

Post Comments (+)