ಬ್ರಿಟನ್ ತಜ್ಞರ ಅಧ್ಯಯನ: ಭಾರತದಲ್ಲಿ ಕೊಳೆಗೇರಿ ಪ್ರವಾಸೋದ್ಯಮ

7

ಬ್ರಿಟನ್ ತಜ್ಞರ ಅಧ್ಯಯನ: ಭಾರತದಲ್ಲಿ ಕೊಳೆಗೇರಿ ಪ್ರವಾಸೋದ್ಯಮ

Published:
Updated:
ಬ್ರಿಟನ್ ತಜ್ಞರ ಅಧ್ಯಯನ: ಭಾರತದಲ್ಲಿ ಕೊಳೆಗೇರಿ ಪ್ರವಾಸೋದ್ಯಮ

ಲಂಡನ್(ಪಿಟಿಐ): `ಸ್ಲಂ ಡಾಗ್ ಮಿಲಿಯನೇರ್~ ಚಿತ್ರದ ಪ್ರಭಾವಕ್ಕೆ ಒಳಗಾಗಿ ಶ್ರೀಮಂತ ಪ್ರವಾಸಿಗರು ಮುಂಬೈ ಮತ್ತಿತರ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ಬ್ರಿಟನ್ ತಜ್ಞರ ಅಧ್ಯಯನಕ್ಕೆ ಆಹಾರವಾಗಿದೆ.ಲೀಸ್ಟರ್ ವಿಶ್ವವಿದ್ಯಾಲಯದ ತಜ್ಞರು ಭಾರತದಲ್ಲಿ ಕೊಳೆಗೇರಿ ಪ್ರವಾಸೋದ್ಯಮ ಕುರಿತು ಅಧ್ಯಯನ ನಿರತರಾಗಿದ್ದಾರೆ. ಜಾಗತಿಕ ಅಸಮಾನತೆ ಹಾಗೂ ಅನ್ಯಾಯಗಳನ್ನು ತೊಡೆದುಹಾಕುವುದು ಈ ಅಧ್ಯಯನದ ಮುಖ್ಯ ಉದ್ದೇಶವಂತೆ. ಐರೋಪ್ಯ ಒಕ್ಕೂಟದ ಪ್ರಾಯೋಜಕತ್ವದಲ್ಲಿ ಲೀಸ್ಟರ್ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ. ಫೆಬಿಯನ್ ಫೆಂಜಿಲ್ ಅವರು ಈ ಅಧ್ಯಯನ ಕೈಗೊಂಡಿದ್ದಾರೆ. `ಕೊಳೆಗೇರಿ ಪ್ರವಾಸೋದ್ಯಮದ ಪರಿಕಲ್ಪನೆ ವಿಚಿತ್ರ    ಎನ್ನಿಸಬಹುದು. ಆದರೆ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರು ಪ್ರಮುಖವಾಗಿ ಭಾರತ, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದ ಕೊಳೆಗೇರಿಗಳಿಗೆ ಭೇಟಿ ನೀಡುತ್ತಿರುವುದು ಹೆಚ್ಚುತ್ತಿದೆ ಎನ್ನುತ್ತಾರೆ~ ಡಾ. ಫೆಬಿಯನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry