ಸೋಮವಾರ, ಏಪ್ರಿಲ್ 12, 2021
25 °C

ಬ್ರಿಟನ್ ವಿವಿಗಳಲ್ಲಿ ಹೆಚ್ಚು ಅವ್ಯವಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್, (ಪಿಟಿಐ):ಬ್ರಿಟನ್ ವಿಶ್ವವಿದ್ಯಾಲಯಗಳಲ್ಲಿ ವಂಚನೆ ಪ್ರಕರಣಗಳು ವ್ಯಾಪಕವಾಗಿ ನಡೆಯುತ್ತಿದ್ದು ವಿಶ್ವವಿಖ್ಯಾತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ 2009-10ರಲ್ಲಿ 17,000ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಈ ಕುರಿತು ನಡೆಸಲಾದ ಸಮೀಕ್ಷೆ ತಿಳಿಸಿದೆ.ಸುಮಾರು 80 ವಿಶ್ವವಿದ್ಯಾಲಯಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಬ್ರಿಟನ್‌ನ ಬಹುತೇಕ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಸಂಬಂಧಿ ಅವ್ಯವಹಾರಗಳು ಅವ್ಯಾಹತವಾಗಿವೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.ಪರೀಕ್ಷೆಯಲ್ಲಿ ಜಯಗಳಿಸಲು ಅಧ್ಯಾಪಕರಿಗೆ ಲಂಚ ನೀಡುವುದು, ಇಂಟರ್‌ನೆಟ್ ಮೂಲಕ ಪ್ರಬಂಧಗಳನ್ನು ಪಡೆಯುವುದು ಮುಂತಾದ ಅವ್ಯವಹಾರಗಳು ಇಲ್ಲಿ ಸಾಮಾನ್ಯವಾಗಿವೆ ಎಂದು ಸಮೀಕ್ಷೆ ತಿಳಿಸಿದೆ. ಆದರೆ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳು ಮಾತ್ರ ಬೆಳಕಿಗೆ ಬರುತ್ತವೆ ಎಂದೂ ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.