ಶುಕ್ರವಾರ, ಮೇ 7, 2021
20 °C

ಬ್ರಿಟನ್ ಸಂಸದನ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಹಿಡಿದು ಕೊಟ್ಟವರಿಗೆ 10 ದಶಲಕ್ಷ ಪೌಂಡ್ ಬಹುಮಾನ ಘೋಷಿಸಿದ ಬ್ರಿಟನ್ ಸಂಸದ ನಾಜೀರ್ ಅಹ್ಮದ್ ಅವರನ್ನು ಲೇಬರ್ ಪಕ್ಷದಿಂದ ಅಮಾನತು ಮಾಡಲಾಗಿದೆ.ಮುಂಬೈ ಬಾಂಬ್ ದಾಳಿ ಪ್ರಮುಖ ಆರೋಪಿ ಎಂದು ಆರೋಪಿಸಲಾದ ಜಮಾತ್-ಉದ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಕೋಟಿ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದ ಬಳಿಕ ಸಂಸದ ಅಹ್ಮದ್ ಅವರೂ ಈ ಬಹುಮಾನ ಘೋಷಿಸಿದ್ದರು.ಸಯೀದ್‌ಗಾಗಿ ಅಮೆರಿಕ ಬಹುಮಾನ ಪ್ರಕಟಿಸಿರುವುದು ಎಲ್ಲ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಅಹ್ಮದ್ ಬಣ್ಣಿಸಿದ್ದಾರೆ ಎಂದು ಡೈಲಿ ಮೇಲ್ ವರದಿ ಮಾಡಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.