ಬ್ರಿಟಿಷ್ ಆಡಳಿತ ನೆನಪಿಸಿದ ಆದೇಶ

7

ಬ್ರಿಟಿಷ್ ಆಡಳಿತ ನೆನಪಿಸಿದ ಆದೇಶ

Published:
Updated:

ಇತ್ತೀಚೆಗೆ ಕೊಪ್ಪಳ ಜಿಲ್ಲಾಧಿಕಾರಿಗಳು ಒಂದು ಆದೇಶ ಹೊರಡಿಸಿದರು. ಬೆಂಬಲ ಬೆಲೆ ಕೊಟ್ಟು ರೈತರಿಂದ ಉಳ್ಳಾಗಡ್ಡಿ ಖರೀದಿಸಲು ಸರ್ಕಾರಿ ನೌಕರರಿಗೆ ಸೂಚನೆ ನೀಡಿದ ಆದೇಶವದು. ಇದರಿಂದ ಸರ್ಕಾರಿ ನೌಕರರು ತಲಾ ಒಂದು ಕ್ವಿಂಟಲ್ ಉಳ್ಳಾಗಡ್ಡಿಯನ್ನು ರೂ 300 ಕೊಟ್ಟು ಖರೀದಿಸಬೇಕಾಯಿತು.ಖರೀದಿಸಿದ ಉಳ್ಳಾಗಡ್ಡಿಗಳನ್ನು ಆಯಾ ಇಲಾಖೆಯ ತಾಲ್ಲೂಕು ಹಾಗೂ ಹೋಬಳಿ ಕೇಂದ್ರದಲ್ಲಿ ಇಟ್ಟು ಅಲ್ಲಿಂದ ಪ್ರತಿಯೊಬ್ಬ ನೌಕರನೂ ಮನೆಗೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ್ದರು. ಸರ್ಕಾರಿ ನೌಕರರಿಗೆ ಉಳ್ಳಾಗಡ್ಡಿ ಖರೀದಿಸಲು ಸೂಚಿಸಿದ ಜಿಲ್ಲಾಧಿಕಾರಿಗಳ ಧೋರಣೆ ಬ್ರಿಟಿಷರ ಆಡಳಿತವನ್ನು ನೆನಪಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry