ಬ್ರಿಟಿಷ್ ಬ್ಯುಸಿನೆಸ್ ಗ್ರೂಪ್ ಶಾಖಾ ಕಚೇರಿ ಆರಂಭ

ಮಂಗಳವಾರ, ಜೂಲೈ 23, 2019
27 °C

ಬ್ರಿಟಿಷ್ ಬ್ಯುಸಿನೆಸ್ ಗ್ರೂಪ್ ಶಾಖಾ ಕಚೇರಿ ಆರಂಭ

Published:
Updated:

ಬೆಂಗಳೂರು: ಕೈಗಾರಿಕಾ ಚಟುವಟಿಕೆ ಗಳನ್ನು ವಿಸ್ತರಿಸಲು ಪೂರಕವಾಗುವ ನಿಟ್ಟಿನಲ್ಲಿ ಆರಂಭಿಸಿರುವ ಬ್ರಿಟಿಷ್ ಬ್ಯುಸಿನೆಸ್ ಗ್ರೂಪ್‌ನ ಬೆಂಗಳೂರು ಶಾಖೆಯನ್ನು ಬ್ರಿಟಿಷ್ ಹೈ ಕಮಿಷನರ್ ಜೇಮ್ಸ ಬೆವನ್ ಶುಕ್ರವಾರ ಇಲ್ಲಿ ಉದ್ಘಾಟಿಸಿದರು.



ನಂತರ ಮಾತನಾಡಿದ ಅವರು, ಸದ್ಯ ಚೆನ್ನೈ, ದೆಹಲಿ, ಗೋವಾ ಮತ್ತು ಹೈದ ರಾಬಾದ್, ಮುಂಬೈ, ಪುಣೆಯಲ್ಲಿ ಬ್ರಿಟಿಷ್ ಬ್ಯುಸಿನೆಸ್ ಗ್ರೂಪ್‌ನ ಶಾಖೆ ಗಳಿವೆ. ಬೆಂಗಳೂರಿನಲ್ಲಿ ಹೊಸ ಶಾಖೆ ಆರಂಭಿಸಿರುವುದರಿಂದ ಬ್ರಿಟನ್ ಮತ್ತು ಭಾರತದ ನಡುವೆ ವ್ಯಾಪಾರ-ವಹಿ ವಾಟುಗಳನ್ನು ವಿಸ್ತರಿಸಲು ಮತ್ತಷ್ಟು ಅನುಕೂಲವಾಗಲಿದೆ ಎಂದರು.



ಬ್ರಿಟನ್-ಭಾರತ ಪರಸ್ಪರ ಸಹಕಾರ ದಿಂದ ಕಾರ್ಯನಿರ್ವಹಿಸುವ ಮೂಲಕ ಎರಡೂ ರಾಷ್ಟ್ರಗಳ ನಡುವೆ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳನ್ನು ವಿಸ್ತರಿಸ ಬೇಕು. ಬಂಡವಾಳ ಹೂಡಿಕೆಗೆ ಪೂರಕ  ವಾತಾವರಣ ಕಲ್ಪಿಸಬೇಕು ಎಂಬ ಉದ್ದೇ ಶವನ್ನು ಬ್ರಿಟನ್ ಪ್ರಧಾನಿ ಡೆವಿಡ್ ಕ್ಯಾಮರಾನ್ ಹೊಂದಿದ್ದಾರೆ ಎಂದರು.



ಉದ್ದೇಶಿತ ಬೆಂಗಳೂರು - ಮುಂಬೈ ಆರ್ಥಿಕ ಕಾರಿಡಾರ್ (ಬಿಎಂಇಸಿ) ನಿರ್ಮಾಣಕ್ಕೆ ಭಾರತಕ್ಕೆ ಅಗತ್ಯವಿರುವ ಸಹಕಾರ ನೀಡಲು ಬ್ರಿಟನ್ ಉತ್ಸುಕ ವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಬಯಸಿದರೆ ಇದಕ್ಕೆ ಬೇಕಾದ ನೆರವು ನೀಡಲಾಗುವುದು ಎಂದರು.



ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಬೆವನ್, ಕಾರಿಡಾರ್‌ನ ವಿನ್ಯಾಸ ಮತ್ತು ಅಭಿವೃದ್ಧಿಗೆ ಬೇಕಾದ ಸಹಕಾರ ನೀಡುವುದಾಗಿ ತಿಳಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಸಿದ್ದರಾಮಯ್ಯ, `ಕೇಂದ್ರ ಮೊದಲು ಈ ಯೋಜನೆಗೆ ಒಪ್ಪಿಗೆ ನೀಡಲಿ, ಆ ನಂತರ ಈ ವಿಷಯದ ಬಗ್ಗೆ ಚರ್ಚೆ ನಡೆಸೋಣ' ಎಂದು ತಿಳಿಸಿದರು ಎನ್ನಲಾಗಿದೆ.



ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತ ಎಂ.ಮಹೇಶ್ವರರಾವ್ ಒಟ್ಟು ದೇಶಿಯಾ ಉತ್ಪನ್ನಕ್ಕೆ ಸದ್ಯ ಉತ್ಪಾದನಾ ವಲಯದ ಕೊಡುಗೆ ಶೇ 12ರಷ್ಟಿದೆ. 5-6 ವರ್ಷಗಳಲ್ಲಿ ಇದನ್ನು ಶೇ 20 - 25ಕ್ಕೆ ಹೆಚ್ಚಿಸುವ ಉದ್ದೇಶವಿದೆ ಎಂದರು. ರೋಲ್ಸ್ ರಾಯ್ ಇಂಡಿಯಾ ದ ಅಧ್ಯಕ್ಷ ಕಿಶೋರ್ ಜಯರಾಮನ್, ಯುಕೆ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್‌ನ ಸಿಇಒ ರಿಚಾರ್ಡ್ ಹೇಲ್ಡ್ ಮೊದಲಾ ದವರು ಮಾತನಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry