ಬ್ರಿಟಿಷ್ ಲೇಖಕಿಗೆ ಬುಕರ್

7

ಬ್ರಿಟಿಷ್ ಲೇಖಕಿಗೆ ಬುಕರ್

Published:
Updated:
ಬ್ರಿಟಿಷ್ ಲೇಖಕಿಗೆ ಬುಕರ್

ಲಂಡನ್ (ಪಿಟಿಐ): ಅಂತರರಾಷ್ಟ್ರೀಯ ಸಾಹಿತ್ಯ ಕ್ಷೇತ್ರದ ಪ್ರತಿಷ್ಠಿತ ಬುಕರ್ ಪ್ರಶಸ್ತಿ ಈ ಬಾರಿ ಖ್ಯಾತ ಬ್ರಿಟಿಷ್ ಕಾದಂಬರಿಗಾರ್ತಿ ಹಿಲರಿ ಮ್ಯಾಂಟಲ್ ಅವರ ಪಾಲಾಗಿದೆ. `ಬ್ರಿಂಗ್ ಅಪ್ ದಿ ಬಾಡೀಸ್~ ಎಂಬ ಕಾದಂಬರಿ ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತಂದು ಕೊಟ್ಟಿದೆ. ಇದು 60 ವರ್ಷದ ಹಿಲರಿ ಅವರಿಗೆ ಸಂದ ಎರಡನೇ ಬುಕರ್ ಪ್ರಶಸ್ತಿಯಾಗಿದ್ದು, ಈ ಮೊದಲು 2009ರಲ್ಲಿ ಅವರ `ವೂಲ್ಫ್ ಹಾಲ್~ ಎಂಬ ಕಾದಂಬರಿ ಮೊದಲ ಬಾರಿಗೆ ಬುಕರ್ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಇದರೊಂದಿಗೆ ಹಿಲರಿ ಎರಡನೇ ಬಾರಿ ಬುಕರ್ ಗಳಿಸಿದ ಪ್ರಥಮ ಮಹಿಳೆ ಮತ್ತು ಪ್ರಥಮ ಬ್ರಿಟಿಷ್ ಲೇಖಕಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.ವರ್ಷದ ಅತ್ಯಂತ ಹೆಚ್ಚು ಮಾರಾಟವಾದ ಬೇಡಿಕೆಯ ಕಾದಂಬರಿ ಎಂಬ ಪ್ರಶಂಸೆಗೆ ಪಾತ್ರವಾಗಿರುವ `ಬ್ರಿಂಗ್ ಅಪ್ ದಿ ಬಾಡೀಸ್~ ಕೃತಿ ಅಂತಿಮ ಪಟ್ಟಿಯಲ್ಲಿದ್ದ ಇನ್ನಿತರ ಐದು ಕೃತಿಗಳನ್ನು ಹಿಂದಕ್ಕಿ ಪ್ರಶಸ್ತಿ ಗಳಿಸಿದೆ.

ಈ ಬಾರಿಯ ಬುಕರ್ ಪ್ರಶಸ್ತಿಯ ನೆಚ್ಚಿನ ಕೃತಿ ಎಂದೇ ಪರಿಗಣಿಸಲಾಗಿದ್ದ ವಿಲ್ ಸೆಲ್ಫ್  ಅವರ `ಅಂಬ್ರೆಲ್ಲಾ~ ಕೂಡಾ ಕೊನೆಯ ಗಳಿಗೆಯವರೆಗೂ ತೀವ್ರ ಪೈಪೋಟಿ ಒಡ್ಡಿತ್ತು.ಸ್ಪರ್ಧೆಯಲ್ಲಿದ್ದ ಭಾರತದ ಜೀತ್ ತಯಿಲ್ ಅವರ `ನಾರ್ಕೊಪೊಲಿಸ್~ ಜೊತೆಗೆ ತಾನ್ ತ್ವಾನ್ ಯಂಗ್  ಅವರ `ದಿ ಗಾರ್ಡನ್ ಆಫ್ ಇವ್ನಿಂಗ್ ಮಿಸ್ಟ್ಸ್~, ದೆಬೊರಾ ಲೆವಿ ಅವರ `ಸ್ವಿಮ್ಮಿಂಗ್ ಹೋಮ್~ ಮತ್ತು ಅಲಿಸನ್ ಮೂರ್ ಅವರ `ದಿ ಲೈಟ್‌ಹೌಸ್~ ಅಂತಿಮ ಪಟ್ಟಿಯಲ್ಲಿದ್ದವು. ಆದರೆ, `ಬ್ರಿಂಗ್ ಅಪ್ ದಿ ಬಾಡೀಸ್~ ಇವೆಲ್ಲವನ್ನೂ ಹಿಂದಿಕ್ಕಿ ಪ್ರಶಸ್ತಿ ಗೌರವಕ್ಕೆ ಪಾತ್ರವಾಯಿತು.ಬ್ರಿಟನ್‌ನ ಅ್ಯನ್ ಬೊಲೆನ್ ಸಾಮ್ರಾಜ್ಯದ ಪತನ, ಹತ್ಯೆ ಮತ್ತು ಐತಿಹಾಸಿಕ ಸಂಗತಿಗಳ ಸುತ್ತ ಹೆಣೆಯಲಾಗಿರುವ `ಬ್ರಿಂಗ್ ಅಪ್ ದಿ ಬಾಡೀಸ್~ ಮತ್ತು ಅವರ ಮತ್ತೊಂದು ಬುಕರ್ ವಿಜೇತ ಕೃತಿ `ವೂಲ್ಫ್ ಹಾಲ್~ ಹಕ್ಕುಗಳನ್ನು ಬಿಬಿಸಿ ಪಡೆದಿದೆ.  ಈ ಎರಡೂ ಕಾದಂಬರಿಗಳನ್ನು ಅದು ನಾಟಕ ರೂಪಕ್ಕೆ ಇಳಿಸುವ ಪ್ರಯತ್ನ ನಡೆಸಿದೆ.ಬ್ರಿಟನ್‌ನ ಬಹುತೇಕ ರಕ್ತಸಿಕ್ತ ಇತಿಹಾಸ, ಸಾಮ್ರಾಜ್ಯಗಳ ಪತನ ಇತ್ಯಾದಿ ಸೂಕ್ಷ್ಮ ಸಂಗತಿಗಳನ್ನು ಅತ್ಯಂತ ರಸವತ್ತಾಗಿ ಅಕ್ಷರ ರೂಪಕ್ಕೆ ಇಳಿಸುವ ಕಲೆಯನ್ನು ಸಿದ್ಧಿಸಿಕೊಂಡಿರುವ ಹಿಲರಿ ಸದ್ಯ `ದಿ ಮಿರರ್ ಆ್ಯಂಡ್ ದಿ ಲೈಟ್~ ಎಂಬ ಕಾದಂಬರಿಯ ಕೊನೆಯ ಕಂತನ್ನು ಬರೆದು ಮುಗಿಸುವ ಧಾವಂತದಲ್ಲಿದ್ದಾರೆ.ಸಾಮಾಜಿಕ ಕಾರ್ಯ

ಸಾಮಾಜಿಕ ಕಾರ್ಯಕರ್ತೆಯಾಗಿ ಸಾರ್ವಜನಿಕ ಜೀವನ ಆರಂಭಿಸಿದ ಹಿಲರಿ 1979ರಲ್ಲಿ ಮೊತ್ತ ಮೊದಲ ಬಾರಿಗೆ ಫ್ರೆಂಚ್ ಕ್ರಾಂತಿ ಎಳೆಯನ್ನು ಹಿಡಿದು ಬರೆದ `ಎ ಪ್ಲೇಸ್ ಆಫ್ ಗ್ರೇಟರ್ ಸೇಫ್ಟಿ~ ಕಾದಂಬರಿ ಹಸ್ತಪ್ರತಿ ಓದಿದ ಎಲ್ಲ ಪ್ರಕಾಶಕರು ಅದನ್ನು ಪ್ರಕಟಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರು. ಕೊನೆಗೆ ಅದು 1992ರಲ್ಲಿ ಪ್ರಕಟಣೆಯ ಭಾಗ್ಯ ಕಂಡಿತು.ಎರಡು ಬಾರಿ ಗೌರವ

ಎರಡು ಬಾರಿ ಬುಕರ್ ಮುಡಿಗೇರಿಸಿಕೊಂಡ ಸಾಧನೆ ಇದೇ ಮೊದಲೇನಲ್ಲ. ಈ ಮೊದಲು ಆಸ್ಟ್ರೇಲಿಯಾದ ಲೇಖಕ ಪೀಟರ್ ಕ್ಯಾರಿ 1988 ಮತ್ತು 2001ರಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಜೆ.ಎಂ. ಕೊಟ್ಜಿ 1983 ಮತ್ತು 1999ರಲ್ಲಿ ಪ್ರಶಸ್ತಿ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದರು.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry