ಬ್ರೆಜಿಲ್ ತೈಲ ನಿಕ್ಷೇಪ: ಚೀನಾದ ಖರೀದಿ ಯತ್ನಕ್ಕೆ ಭಾರತ ತಡೆ

7

ಬ್ರೆಜಿಲ್ ತೈಲ ನಿಕ್ಷೇಪ: ಚೀನಾದ ಖರೀದಿ ಯತ್ನಕ್ಕೆ ಭಾರತ ತಡೆ

Published:
Updated:
ಬ್ರೆಜಿಲ್ ತೈಲ ನಿಕ್ಷೇಪ: ಚೀನಾದ ಖರೀದಿ ಯತ್ನಕ್ಕೆ ಭಾರತ ತಡೆ

ನವದೆಹಲಿ (ಪಿಟಿಐ): ರಾಯಲ್ ಡಚ್ ಷೆಲ್ ಕಂಪೆನಿಯ ಜೊತೆಗೂಡಿ ಬ್ರೆಜಿಲ್ ನ ತೈಲ ನಿಕ್ಷೇಪವನ್ನು 154 ಕೋಟಿ ಅಮೆರಿಕನ್ ಡಾಲರ್ ಗಳಿಗೆ ಖರೀದಿಸುವ  ಮೂಲಕ ಶೇಕಡಾ 35 ರಷ್ಟು ಪಾಲನ್ನು ಪಡೆದುಕೊಂಡಿರುವ ಒಎನ್ ಜಿಸಿ ವಿದೇಶ ನಿಗಮ ಲಿಮಿಟೆಡ್ (ಒವಿಎಲ್) ಬ್ರೆಜಿಲ್ ತೈಲ ನಿಕ್ಷೇಪವನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಚೀನಾದ ಸಿನೋಚೆಮ್ ಸಮೂಹದ ಪ್ರಯತ್ನವನ್ನು ವಿಫಲಗೊಳಿಸಿದೆ. ತನ್ಮೂಲಕ ಇಂತಹ ಸಾಧನೆಗೈದ ಮೊತ್ತ ಮೊದಲ ಭಾರತೀಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್ ಜಿಸಿ)ಯ ಸಾಗರೋತ್ತರ ವಿಭಾಗವಾದ ಒವಿಎಲ್ ಕಂಪೆನಿಯು ರಾಯಲ್ ಡಚ್ ಷೆಲ್ ಕಂಪೆನಿ ಜೊತೆಗೆ ಸಹಯೋಗ ಮಾಡಿಕೊಂಡು ಬ್ರೆಜಿಲ್ ಪೆಟ್ರೋಬ್ರಾಸ್ ನ ಪರ್ಖ್ವೆ ಡಾಸ್ ಕೊಂಚಾಸ್ ಎಂದೇ ಪರಿಚಿತವಾಗಿರುವ ಬ್ಲಾಕ್ ಬಿಸಿ-10 ತೈಲ ನಿಕ್ಷೇಪದ ಶೇಕಡಾ 35ರಷ್ಟು ಪಾಲನ್ನು ಖರೀದಿಸಿದೆ. ಇದನ್ನು ಸಿನೋಚೆಮ್ ಗೆ ಮಾರಲು ಯೋಜಿಸಲಾಗಿತ್ತು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.ಖರೀದಿತ ಶೇಕಡಾ 35 ನಿಕ್ಷೇಪದಲ್ಲಿ ಭಾರತೀಯ ಸಂಸ್ಥೆ ಶೇಕಡಾ 12.8ರಷ್ಟನ್ನು ಪಡೆದರೆ ಉಳಿದ ಶೇಕಡಾ 23ರಷ್ಟು ಷೆಲ್ ಕಂಪೆನಿಗೆ ಹೋಗುವುದು.ಬಿಸಿ -10 ಮೇಲಿರುವ ತಮ್ಮ ಹಾಲಿ ಹಕ್ಕನ್ನು ಬಳಸಿಕೊಂಡ ಒವಿಎಲ್-ಷೆಲ್ ಕಂಪೆನಿಗಳು ನಿರಾಕರಿಸುವ ಅಥವಾ ಖರೀದಿಸುವ ತಮ್ಮ ಮೊದಲ ಹಕ್ಕು ಚಲಾಯಿಸುವುದಾಗಿ ಪೆಟ್ರೊಬ್ರಾಸ್ ಗೆ ತಿಳಿಸುವ ಮೂಲಕ ಇತರರು ನಿಕ್ಷೇಪ ಖರೀದಿಸದಂತೆ ತಡೆ ಹಿಡಿಯುವಲ್ಲಿ ಸಫಲವಾದವು.ಈ ತೈಲ ನಿಕ್ಷೇಪದಲ್ಲಿ ಒವಿಎಲ್ ಪ್ರಸ್ತುತ ಶೇಕಡಾ 15ರಷ್ಟು ಪಾಲು ಹೊಂದಿದ್ದು, ಪೆಟ್ರೋಬ್ರಾಸ್ ಮಾರಾಟ ಮಾಡಿದ ಶೇಕಡಾ 35ರಷ್ಟು ಪಾಲಿನಿಂದ ಶೇಕಡಾ 8ರಷ್ಟು ಹೆಚ್ಚುವರಿ ಪಾಲು ಪಡೆಯುವುದು. ಷೆಲ್ ಶೇಕಡಾ 50ರಷ್ಟು ಪಾಲು ಪಡೆಯವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry