ಬ್ರೆಜಿಲ್ ಸಚಿವರ ಭಾರತ ಪ್ರವಾಸ

7

ಬ್ರೆಜಿಲ್ ಸಚಿವರ ಭಾರತ ಪ್ರವಾಸ

Published:
Updated:

ಬ್ರೆಜಿಲ್ (ಎಎಫ್‌ಪಿ): `ಭಾರತದೊಂದಿಗೆ ರಕ್ಷಣಾ ಸಂಬಂಧ ಸುಧಾರಣೆಗಾಗಿ ದ್ವಿಪಕ್ಷೀಯ ಮಾತುಕತೆ ನಡೆಸಲು ಬ್ರೆಜಿಲ್‌ನ ರಕ್ಷಣಾ ಸಚಿವ ಸೆಲ್ಸೊ ಅಮೊರಿಮ್ ಅವರು ಈ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ~ ಎಂದು ಅವರ ಕಚೇರಿ ಮೂಲಗಳು ತಿಳಿಸಿವೆ.ಶನಿವಾರ ದೆಹಲಿ ತಲುಪುವ ಅವರು, ಪ್ರಧಾನಿ ಮನಮೋಹನ್‌ಸಿಂಗ್, ರಕ್ಷಣಾ ಸಚಿವ ಎ.ಕೆ.ಆಂಟನಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.`ಐದು ದಿನಗಳ ಪ್ರವಾಸದಲ್ಲಿ ಬ್ರಿಕ್ಸ್ ಒಕ್ಕೂಟದ ಸದಸ್ಯರಾಗಿರುವ ಭಾರತ ಮತ್ತು ಬ್ರೆಜಿಲ್ ನಡುವೆ ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ಉಭಯ ರಾಷ್ಟ್ರಗಳು ಮಾತುಕತೆ ನಡೆಸಲಿವೆ~ ಎಂದು ಮೂಲಗಳು ತಿಳಿಸಿವೆ.

 

ಭಾರತ ವಿಶ್ವದಲ್ಲೇ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೊಡ್ಡ ರಾಷ್ಟ್ರವಾಗಿದ್ದು, ಅದೇ ರೀತಿ  ಬ್ರೆಜಿಲ್ ಕೂಡ ರಕ್ಷಣಾ ಕ್ಷೇತ್ರ ಬಲಗೊಳಿಸಲು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಅನ್ಯದೇಶಗಳ ಮೇಲಿನ ತಂತ್ರಜ್ಞಾನ ಅವಲಂಬನೆಯನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry