ಮಂಗಳವಾರ, ಮೇ 24, 2022
30 °C

`ಬ್ರೇಕ್-ಫ್ರೀ' ಉಳಿತಾಯ ಕೊಡುಗೆ: ಪುರವಂಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮನೆ ಖರೀದಿಸಲು ಇಚ್ಛಿಸುವ ಗ್ರಾಹಕರಿಗೆ ಅನುಕೂಲ ಮಾಡಿಕೊಡಲು `ಬ್ರೇಕ್-ಫ್ರೀ' ಹೆಸರಿನಲ್ಲಿ ಹೊಸ ಕೊಡುಗೆ ಪ್ರಕಟಿಸಲಾಗಿದ್ದು, ಹಣ ಪಾವತಿಗೆ ಹೆಚ್ಚಿನ ಸಮಯಾವಕಾಶ ಮತ್ತು ಶುಲ್ಕ ರಿಯಾಯ್ತಿ ಪ್ರಯೋಜನ ಇದರ ಲ್ಲಿವೆ ಎಂದು ರಿಯಲ್ ಎಸ್ಟೇಟ್ ಕ್ಷೇತ್ರದ ಕಂಪೆನಿ `ಪುರವಂಕರ ಪ್ರಾಜೆಕ್ಟ್ಸ್ ಲಿ.' ಹೇಳಿದೆ.ವಿಶಿಷ್ಟ ಸ್ವರೂಪದ ಗ್ರಾಹಕ ಸ್ನೇಹಿ ಯೋಜನೆ ಇದಾಗಿದೆ. 15ರಿಂದ 30 ತಿಂಗಳವರೆಗೂ ಬಡ್ಡಿ ರಿಯಾಯ್ತಿ ಗೃಹಸಾಲ ಪ್ರಯೋಜನವನ್ನು ಗ್ರಾಹಕರು ಪಡೆಯಬಹುದು. ಮುಂಗಡ ಕಾಯ್ದಿರಿಸುವ ಮೊತ್ತ, ಫ್ಲೋರ್ ರೈಸ್ ಮತ್ತು ಗೃಹಸಾಲ ಅರ್ಜಿ ಪರಿಷ್ಕರಣೆ ಶುಲ್ಕದಲ್ಲಿ ವಿನಾಯ್ತಿ. ಅವಧಿ ವಿಸ್ತರಣೆ ಪ್ರಯೋಜನವೂ ಸೇರಿದಂತೆ ಸಾಕಷ್ಟು ಉಳಿತಾಯದ ಲಾಭದ ಅವಕಾಶವಿದೆ. `ಬ್ರೇಕ್-ಫ್ರೀ' ಯೋಜನೆಯಿಂದ ಮನೆ ಮಾರಾಟ ಖಾತರಿ ಮತ್ತು ನಿರ್ಮಾಣ ವೆಚ್ಚಕ್ಕೆ ಅಗತ್ಯ ಹಣವೂ ಕಂಪೆನಿಗೆ ದೊರೆಯುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.