ಭಾನುವಾರ, ಅಕ್ಟೋಬರ್ 20, 2019
22 °C

ಬ್ರೇಕ್ ವಿಫಲ: ಸರಣಿ ಅಪಘಾತ

Published:
Updated:

ಸೋಮವಾರಪೇಟೆ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಅಡ್ಡಾದಿಡ್ಡಿ ಚಲಿಸಿ ರಸ್ತೆ ಬದಿ ನಿಂತಿದ್ದ ವ್ಯಾನ್ ಸೇರಿದಂತೆ 2 ಬೈಕ್ ಜಖಂಗೊಳಿಸಿದ ಘಟನೆ ಸೋಮವಾರ ಸಂಭವಿಸಿದೆ. ಮಾರುಕಟ್ಟೆ ರಸ್ತೆಯಿಂದ ಮಡಿಕೇರಿ ರಸ್ತೆಗೆ ಹೋಗುವ ಸಂದರ್ಭದಲ್ಲಿ ತೋಳೂರುಶೆಟ್ಟಳ್ಳಿ ಗ್ರಾಮದ ನಿವಾಸಿ ಫಾಲಾಕ್ಷ ಚಲಿಸುತ್ತಿದ್ದ ಕಾರಿನ ಬ್ರೇಕ್ ವಿಫಲಗೊಂಡಿತು. ಪರಿಣಾಮವಾಗಿ ರಸ್ತೆ ಬದಿ ನಿಂತಿದ್ದ ವ್ಯಾನ್‌ಗೆ ಗುದ್ದಿ ಮುಂದೆ ಸಾಗಿದ ಕಾರು ಎದುರಿನಿಂದ ಬರುತ್ತಿದ್ದ 2 ಬೈಕ್‌ಗಳಿಗೆ ಅಪ್ಪಳಿಸಿತು.ಇದರಿಂದಾಗಿ ತಲ್ತರಶೆಟ್ಟಳ್ಳಿ ಗ್ರಾಮದ ಕೆ.ಪಿ.ಈರಪ್ಪ, ಶಿವಣ್ಣ ಹಾಗೂ ಬಿ.ಎಸ್.ಎನ್.ಎಲ್ ಉದ್ಯೋಗಿ ಪುಟ್ಟಪ್ಪ ಅವರಿಗೆ ಸಣ್ಣಪುಟ್ಟ ಗಾಯವಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರು.

Post Comments (+)