ಬ್ರೌನ್ ಟ್ರಿ ಆಹಾರ ವೈವಿಧ್ಯ

7

ಬ್ರೌನ್ ಟ್ರಿ ಆಹಾರ ವೈವಿಧ್ಯ

Published:
Updated:
ಬ್ರೌನ್ ಟ್ರಿ ಆಹಾರ ವೈವಿಧ್ಯ

ಆರೋಗ್ಯಕ್ಕೂ ಆಹಾರಕ್ಕೂ ಅವಿನಾಭಾವ ಸಂಬಂಧ. ನಾವು ಸೇವಿಸುವ ಆಹಾರ ಚೆನ್ನಾಗಿ ಇರಬೇಕು, ರಾಸಾಯನಿಕದಿಂದ ಮುಕ್ತವಾಗಿರಬೇಕು ಎಂಬ ಜಾಗೃತಿ ಎಲ್ಲೆಡೆ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿಯೇ ಚರ್ಚ್‌ಸ್ಟ್ರೀಟ್, ಕೋರಮಂಗಲ, ಮಲ್ಲೇಶ್ವರ ಸಂಪಿಗೆ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಚೆನ್ನೈ ಮೂಲದ `ಬ್ರೌನ್ ಟ್ರಿ~. ಇಲ್ಲಿ ದೇಶದ ವಿವಿಧೆಡೆಯಿಂದ ಆರೋಗ್ಯಕರ, ಸಾವಯವ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಒಂದೇ ಸೂರಿನಡಿ ಗ್ರಾಹಕರಿಗೆ ಪೂರೈಸಲಾಗುತ್ತದೆ. ಸುಮಾರು 80 ವಿಧದ ಡ್ರೈಫ್ರೂಟ್‌ಗಳು, 60ಕ್ಕೂ ಹೆಚ್ಚು ಬಗೆಯ ಮಸಾಲೆಗಳು, ಆರೋಗ್ಯವರ್ಧಕ ಆಹಾರಗಳು, ಗುಣಮಟ್ಟದ ಆಮದು ಚಾಕಲೇಟ್‌ಗಳು, ಬಿಸ್ಕೆಟ್‌ಗಳು, ಬ್ರೌನ್ ಟಿ, ಹಸಿರು ಚಹಾ ಮತ್ತು ಕಾಫಿ, ಡಯಟ್ ಸ್ನ್ಯಾಕ್, ಉಡುಗೊರೆ ಹ್ಯಾಂಪರ್‌ಗಳು, ಹಾಲಿನ  ಶೀತಲೀಕರಿಸಿದ ಉತ್ಪನ್ನಗಳು, ಐಸ್‌ಕ್ರೀಮ್, ಸಾಂಪ್ರದಾಯಿಕ ಆಹಾರ ಪದ್ಧತಿಯಲ್ಲಿ ಮುಖ್ಯವಾದ ನೆಲ್ಲಿಕಾಯಿ ರಸ, ಗಿಡಮೂಲಿಕೆಯುಕ್ತ ಪದಾರ್ಥಗಳು, ಸಕ್ಕರೆ ಮುಕ್ತ ಪೇಯಗಳು ಮತ್ತು ಹುರಿದ ತಿಂಡಿಗಳು ಇಲ್ಲಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry