ಬ್ರೌನ್ ಶುಗರ್ ವಶ: 11ಜನರ ಬಂಧನ

ಬುಧವಾರ, ಜೂಲೈ 17, 2019
24 °C

ಬ್ರೌನ್ ಶುಗರ್ ವಶ: 11ಜನರ ಬಂಧನ

Published:
Updated:

ಬಣಕಲ್ (ಮೂಡಿಗೆರೆ ತಾಲ್ಲೂಕು): ತಾಲ್ಲೂಕಿನ ಕೊಟ್ಟಿಗೆಹಾರ ಬಳಿ ಬ್ರೌನ್ ಶುಗರ್ ಮಾರಾಟಕ್ಕೆ ಸಂಚು ಹೂಡಿದ್ದ 11ಮಂದಿಯನ್ನು ಬಣಕಲ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.ಈ ತಂಡ ಕೊಳ್ಳೇಗಾಲದಿಂದ ಈ ಮಾದಕ ವಸ್ತು ತಂದು, ಹಾಸನ ಹಾಗೂ ಇತರೆ ಜಿಲ್ಲೆಗಳಲ್ಲಿ ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದ ವೇಳೆ ಬಂಧಿಸಲಾಯಿತು.ಕೊಳ್ಳೇಗಾಲ ಬಳಿಯ ಒಕ್ಕನಹಳ್ಳಿಯ ಮಹೇಂದ್ರ, ಮದ್ದೂರಿನ ರಾಜೇಶ, ಮಾಳಿಗನಾಡು ಗ್ರಾಮದ ಸುನಿಲ್, ಸುರೇಶ್, ಹಾಸನದ ರವಿಶೆಟ್ಟಿ, ಮಂಜೇಗೌಡ, ತಿಲಕ್ ಕುಮಾರ್, ನಿತಿನ್ ರಾಜ್, ಮಹೇಶ, ಬೆಂಗಳೂರಿನ ರಾಘವೇಂದ್ರ, ಮಂಜುನಾಥ ಬಂಧಿತರು.ಬಂಧಿತರನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.ಬಂಧಿತರಿಂದ 835ಗ್ರಾಂ ಬ್ರೌನ್ ಶುಗರ್, ಏಳು ಮೊಬೈಲ್, ಎರಡೂವರೆ ಸಾವಿರ ನಗದು  ವಶಪಡಿಸಿಕೊಳ್ಳಲಾಗಿದೆ.ಪ್ರಮುಖ ಆರೋಪಿ ಮಹೇಶ್ ಕೊಟ್ಟಿಗೆಹಾರದಲ್ಲಿ ಸಂಚು ರೂಪಿಸುತ್ತಿದ್ದಾಗ ಖಚಿತ ಮಾಹಿತಿಯಂತೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, ಡಿವೈಎಸ್‌ಪಿ ವೇದಮೂರ್ತಿ, ಮೂಡಿಗೆರೆ ವೃತ್ತ ನಿರೀಕ್ಷಕ ಬಷೀರ್ ಅಹಮದ್, ಮಾರ್ಗದರ್ಶನದಲ್ಲಿ ಬಣಕಲ್ ಠಾಣಾಧಿಕಾರಿ ಬಾಲಕೃಷ್ಣ, ಸಿಬ್ಬಂದಿ ಕೃಷ್ಣೇಗೌಡ, ನಂದೀಶ್,ಪ್ರವೀಣ್, ರವೀಂದ್ರ ಕಾರ್ಯಾಚರಣೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry