ಮಂಗಳವಾರ, ಮೇ 18, 2021
28 °C

ಬ್ಲಿಂಟ್‌ನಲ್ಲಿ ಬಿಳಿ ಸುಂದರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಲಿಂಟ್‌ನಲ್ಲಿ ಬಿಳಿ ಸುಂದರಿ...

ಬಿಳಿ ಟಿ- ಶರ್ಟ್, ನೇರಳೆ  ಪ್ಯಾಂಟ್, ಕೂದಲಿಗೆ ಬ್ರೌನ್ ಕಲರ್, ಹೆಣೆದು ಮುಂದಕ್ಕೆ ಬಿಟ್ಟ ಜಡೆ... ಪಕ್ಕಾ ಕಾಂಟೆಪರರಿ ಲುಕ್. ಅದರಲ್ಲಿಯೇ ನೆರೆಮನೆ ಹುಡುಗಿಯಂತೆ ಕಾಣುತ್ತಿದ್ದ ದೀಪಿಕಾಳನ್ನು ಕ್ಯಾಮೆರಾದಲ್ಲಿ ತುಂಬಿಕೊಳ್ಳಲು ಛಾಯಾಗ್ರಾಹಕರ ಸೆಣಸಾಟ. ಆಟೋಗ್ರಾಫ್ ಪಡೆಯಲು ಅಭಿಮಾನಿಗಳ ಪರದಾಟ. ದೀಪಿಕಾಳನ್ನು ಒಂದು ಕ್ಷಣ ಕಣ್ಣು ತುಂಬಿಸಿಕೊಳ್ಳಲು ಯುವಕರ ಕಿತ್ತಾಟ. ಇವು ಇಷ್ಟು ಕಂಡು ಬಂದಿದ್ದು ಮಗರ್ತ್ ರಸ್ತೆ `ಬ್ಲೂ ಬ್ಲಿಂಟ್ ಹೇರ್ ಸೆಲೂನ್~ ಉದ್ಘಾಟನೆಯ ವೇದಿಕೆಯಲ್ಲಿ.

ದೀಪಿಕಾ ಹೇಳಿದ್ದು...ಮಾಡೆಲಿಂಗ್ ಜೀವನ ಶುರುವಾದಾಗಿನಿಂದಲೂ ಇಲ್ಲಿಯೇ ಹೇರ್ ಡ್ರೆಸಿಂಗ್ ಮಾಡಿಸಿಕೊಳ್ಳುತ್ತ್ದ್ದಿದೇನೆ. ನಾನು ಕೂದಲು ಬಿಡುವುದು ಕಡಿಮೆ. ಆದಷ್ಟು ಕ್ಲಿಪ್ ಅಥವಾ ಜಡೆ ಹೆಣೆದುಕೊಳ್ಳುತ್ತೇನೆ. ಯಾಕೆಂದರೆ ಇದು ನನ್ನ ಸ್ಟೈಲ್.ನಿಮ್ಮ ಮುಖಕ್ಕೆ ಯಾವ ರೀತಿಯ ಸ್ಟೈಲ್ ಹೊಂದುತ್ತದೋ ಅದೇ ರೀತಿ ಡ್ರೆಸಿಂಗ್ ಮಾಡಿ. ಕೂದಲಿಗೆ ಬಣ್ಣ ಹಚ್ಚಿಸಿಕೊಳ್ಳುವಾಗ ಹುಷಾರಾಗಿರಿ , ಅದು ನಿಮಗೆ ಒಪ್ಪುತ್ತದೆ ಎಂದಾಗ ಮಾತ್ರ ಮಾಡಿಸಿ ಎಂದು ಅವರು ಸಲಹೆ ನೀಡಿದರು.ಬ್ಲಿಂಟ್ ಬಗ್ಗೆ...

2004ರಲ್ಲಿ ಓಶ್ ಭಬಾನಿ ಮತ್ತು ಅಧುನಾ ಭಬಾನಿ ಅಖ್ತರ್ ಸ್ಥಾಪಿಸಿದ ಈ ಹೇರ್ ಡ್ರೆಸಿಂಗ್ ಸಲೂನ್ ದೇಶದ ವಿವಿಧೆಡೆ ಶಾಖೆ ಹೊಂದಿದೆ. ಬಾಲಿವುಡ್ ತಾರೆಗಳ ಮೆಚ್ಚಿನ ಸೆಲೂನ್. ಜಿಂದಗಿ ನಾ ಮಿಲೇಗಿ ದುಬಾರ, ದಿಲ್ ಚಾಹ್ತಾ ಹೈ, ಧೂಮ್ 2, ಲಕ್ಷ್ಯ, ರಾಕ್ ಆನ್, ರಂಗ್‌ದೇ ಮತ್ತಿತರ ಚಲನಚಿತ್ರಗಳಲ್ಲಿ ಕೇಶಾಲಂಕಾರ ಮಾಡಿದೆ. ಸರಳ, ಬಣ್ಣ, ಕೃತಕ ಕೂದಲುಗಳಿಂದ ವ್ಯಕ್ತಿಗೆ ಹೊಸ ಚಹರೆ ತಂದು ಕೊಡುತ್ತಿದೆ. ಅಂತರಾಷ್ಟ್ರೀಯ ಖ್ಯಾತಿಯ ಸ್ಟೈಲಿಸ್ಟ್ ಏವನ್ ಕಂಟ್ರಾಕ್ಟರ್ ಮತ್ತು ಬ್ರೆಂಟ್ ಬಾರ್ಬ್ ಇದರಲ್ಲಿದ್ದಾರೆ.ಹೇರ್ ಸ್ಟೈಲಿಂಗ್ ಅತ್ಯಂತ ವೈಯಕ್ತಿಕ ಸಂಗತಿ. ಬಾಲಿವುಡ್ ಚಿತ್ರೋದ್ಯಮದಲ್ಲಿ ಸಕ್ರಿಯವಾಗಿರುವುದರಿಂದ ನಾವು ಎಲ್ಲ  ಗ್ರಾಹಕರಿಗೂ ತಾವೇ ಸ್ವತಃ ಸೆಲಿಬ್ರಿಟಿ ಎಂಬ ಭಾವನೆ ಮೂಡಿಸುವುದರೊಂದಿಗೆ ಜಾಗತಿಕ ಮಟ್ಟದ ಅನುಭವ ಒದಗಿಸುತ್ತೇವೆ ಎನ್ನುತ್ತಾರೆ ಅಧೂನ್.ಈ ಸೆಲೂನ್‌ನಲ್ಲಿ ಹೇರ್ ಕಟ್ಟಿಂಗ್, ವ್ಯಾಕ್ಸಿಂಗ್, ಥ್ರೆಡಿಂಗ್, ಮೇಕಪ್, ಫೇಶಿಯಲ್ ಸೇವೆಗಳಿವೆ. ಮೊಟ್ಟ ಮೊದಲ ಬಾರಿಗೆ ಬ್ಲೋ ಔಟ್ ಬಾರ್ ಕೂಡ ಇದೆ. ಆಕರ್ಷಕ ಪರಿಸರದ ಮೆನಿಕ್ಯೂರ್‌ನಿಂದ ಕಾಸ್ಮೆಟಿಕ್ಸ್  ಹೇರ್ ಡ್ರೆಸಿಂಗ್‌ವರೆಗೆ ಮತ್ತು ಬರೀ ನೈಟ್ ಔಟ್‌ಗೂ ಸೂಕ್ತ ತಾಣವಾಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.