ಬ್ಲೆಂಡರ್ಸ್‌ ಸುಂದರಿಯರು

7

ಬ್ಲೆಂಡರ್ಸ್‌ ಸುಂದರಿಯರು

Published:
Updated:
ಬ್ಲೆಂಡರ್ಸ್‌ ಸುಂದರಿಯರು

ನಸುಗೆಂಪು, ತುಸು ಬಿಳಿ ಬಣ್ಣದ ಕೃತಕ ಹೂಗಳನ್ನು ಮುಡಿದುಕೊಂಡಿದ್ದ ರೂಪದರ್ಶಿಗಳೆಲ್ಲಾ ಕಣ್ಣ ರೆಪ್ಪೆಗೆ ನವಿಲುಗರಿ ಸಿಕ್ಕಿಸಿಕೊಂಡಿದ್ದರು. ನವಿಲು ಗರಿ ಬಿಚ್ಚಿ ಕುಣಿದರೆ, ಇವರು ತಮ್ಮ ಅಂಗಸೌಷ್ಠವ ಪ್ರದರ್ಶಿಸುತ್ತಾ ಬೆಡಗು ಭಿನ್ನಾಣ ಪ್ರದರ್ಶಿಸಿದರು.

ರಂಗು ರಂಗಾಗಿದ್ದ ಶೋನಲ್ಲಿ ಡಿಸೈನರ್‌ಗಳ ವಿನ್ಯಾಸಕ್ಕಿಂತ ರೂಪದರ್ಶಿಗಳ ಚೆಲುವು, ಮಾದಕತೆ ಎಲ್ಲರ ಕಣ್ಣು ಕುಕ್ಕುತ್ತಿತ್ತು. ನೋಡಿದಷ್ಟೂ ನೋಡಬೇಕು ಅನಿಸುವ ರೂಪದರ್ಶಿಗಳ ಚೆಲುವನ್ನು ಎಲ್ಲರೂ ಕಣ್ತುಂಬಿಕೊಂಡರು. ಫ್ಯಾಷನ್ ಶೋ ಆರಂಭಕ್ಕೂ ಮುನ್ನವೇ ನಶೆ ಏರಿಸಿಕೊಂಡು ಕುಳಿತಿದ್ದ ಫ್ಯಾಷನ್ ಪ್ರಿಯರಿಗೆ ಆವತ್ತು ರಸಗವಳ.

`ಬ್ಲೆಂಡರ್ಸ್ ಫ್ರೈಡ್ ಫ್ಯಾಷನ್ ಟೂರ್~ನ ಎಂಟನೇ ಆವೃತ್ತಿಯಲ್ಲಿ ಹಲವು ವಿಶೇಷಗಳಿದ್ದವು.ಫ್ಯಾಷನ್ ಡಿಸೈನಿಂಗ್ ಲೋಕದ ದಿಗ್ಗಜರು ಭಾಗವಹಿಸಿದ್ದು ಒಂದು ವಿಶೇಷವಾದರೆ, ಶೋ ಸ್ಟಾಪರ್ಸ್‌ ಆಗಿ ಬಾಲಿವುಡ್ ನಟರಾದ ಕುನಾಲ್ ಕಪೂರ್, ಎವ್ಲಿನ್ ಶರ್ಮಾ, ಷಜಾನ್ ಪದಂಸಿ ಭಾಗವಹಿಸಿದ್ದು ಮತ್ತೊಂದು ವಿಶೇಷ.ಖ್ಯಾತ ಡಿಸೈನರ್‌ಗಳ ವಸ್ತ್ರ ವಿನ್ಯಾಸ, ಮಾಡೆಲ್‌ಗಳ ರ‌್ಯಾಂಪ್ ವಾಕ್, ನಶೆ ಏರಿಸಲು ಗುಂಡು ಇವೆಲ್ಲವೂ ಫ್ಯಾಷನ್ ಟೂರ್ ಕಳೆಗಟ್ಟಿಸಿದವು. ನಿದಾ ಮೊಹಮೂದ್ ಅವರ ವಸ್ತ್ರ ವಿನ್ಯಾಸಗಳನ್ನು ಪ್ರದರ್ಶಿಸುವುದರರೊಂದಿಗೆ ಪ್ರಾರಂಭಗೊಂಡ ಶೋ, ರಾಡ್ರಿಕ್ಸ್ ಅವರ ಸಂಗ್ರಹದ ಅನಾವರಣದೊಂದಿಗೆ ಮುಕ್ತಾಯಗೊಂಡಿತು.ಖ್ಯಾತ ಡಿಸೈನರ್ ನಿದಾ ಅವರ ಸಂಗ್ರಹ ಫ್ಯಾಷನ್ ಟೂರ್‌ನ ಹೈಲೈಟ್ಸ್‌ನಲ್ಲಿ ಒಂದು. ಇವರ ಸಂಗ್ರಹದ ಹೆಸರು `ಬಾಂಬೆ ಬನ್ ಮಸ್ಕಾ~. 70 ಮತ್ತು 80ರ ದಶಕದಲ್ಲಿ ಜನಪ್ರಿಯ ಶೈಲಿಯನ್ನು ಇವರು ತಮ್ಮ ವಿನ್ಯಾಸಕ್ಕೆ ಆಯ್ದುಕೊಂಡಿದ್ದರು.

 

ಮುಂಬೈ ಜನರು ಆ ದಿನಗಳಲ್ಲಿ ಧರಿಸುತ್ತಿದ್ದ ವಸ್ತ್ರಗಳನ್ನು ಇವರು ತಮ್ಮದೇ ಶೈಲಿಗೆ ಒಗ್ಗಿಸಿಕೊಂಡು ಆಕರ್ಷಕವಾಗಿ ವಿನ್ಯಾಸಗೊಳಿಸಿದ ವಸ್ತ್ರಗಳನ್ನು ರೂಪದರ್ಶಿಗಳು ಪ್ರದರ್ಶಿಸಿದರು. ಇವರು ವಿನ್ಯಾಸ ಮಾಡಿದ್ದ ಸೀರೆಗಳು, ಡ್ರೆಸ್‌ಗಳು ಹಾಗೂ ಶರ್ಟ್ಸ್ ಮುಂಬೈನ ಸ್ಟ್ರೀಟ್ ಕಲ್ಚರ್ ಹಾಗೂ ಬಾಲಿವುಡ್‌ಸ್ಟೈಲ್‌ನ ಸಮ್ಮಿಶ್ರದಂತಿತ್ತು.ನಿದಾ ವಿನ್ಯಾಸಗೊಳಿಸಿದ್ದ ಆಕರ್ಷಕ ಕುಸುರಿಯುಳ್ಳ ಸೀರೆ ತೊಟ್ಟು ಬಂದ ಷಜಾನ್ ಪದಂಸಿ ರಾಜ ಕುಮಾರಿಯಂತೆ ಕಂಗೊಳಿಸುತ್ತಿದ್ದರು.ರಾಘವೇಂದ್ರ ರಾಥೋರ್ ಅವರ ಸಂಗ್ರಹದ ಹೆಸರು `ಕ್ಲಬ್ ಜೋಧ್‌ಪುರ್~. ಇವರು ವಿನ್ಯಾಸ ಮಾಡಿದ್ದ ಜೋಧ್‌ಪುರ್ ಜಾಕೆಟ್ಸ್, ಕುರ್ತಾ, ಚೂಡಿದಾರ್, ನೆಹರೂ ಜಾಕೆಟ್ಸ್ ಹಾಗೂ ಕಸೂತಿ ಮಾಡಿದ ವೇಯ್ಸ್ಟಕೋಟ್‌ಗಳನ್ನು ತೊಟ್ಟು ರೂಪದರ್ಶಿಗಳು ರ‌್ಯಾಂಪ್‌ವಾಕ್ ಮಾಡಿದರು.

 

ಫಂಕಿ ಮತ್ತು ಸ್ಟೈಲಿಶ್ ಉಡುಗೆಗಳನ್ನು ಇಷ್ಟಪಡುವವರಿಗೆ ರಾಘವೇಂದ್ರ ಅವರ ವಿನ್ಯಾಸ ಎಲ್ಲರಿಗೂ ಇಷ್ಟವಾದವು. ಇವರ ಸಂಗ್ರಹದಲ್ಲಿ ಡೆನಿಮ್ಸ, ಡೇ ವೇರ್, ಎಥ್ನಿಕ್ ಹಾಗೂ ಹಬ್ಬದಲ್ಲಿ ಧರಿಸಲು ಸೂಕ್ತವಾದಂತಹ ವಸ್ತ್ರಗಳಿದ್ದವು.`ರಾಘವೇಂದ್ರ ರಾಥೋರ್ ಖ್ಯಾತ ವಸ್ತ್ರ ವಿನ್ಯಾಸಕ. ಅವರು ನನ್ನಿಷ್ಟದ ಡಿಸೈನರ್ ಕೂಡ ಹೌದು. ನಾನು ಅವರ ಅನೇಕ ವಿನ್ಯಾಸಗಳಿಗೆ ರೂಪದರ್ಶಿಯಾಗಿದ್ದೇನೆ. ರಾಥೋರ್ ಯಾವುದೇ ಬಗೆಯ ವಿನ್ಯಾಸ ಮಾಡಿದರೂ ಅದು ಭಿನ್ನವಾಗಿರುತ್ತದೆ. ಅವರ ಕೆಲಸದಲ್ಲಿ ಅಚ್ಚುಕಟ್ಟುತನವನ್ನು ಕಾಣಬಹುದು~ ಎಂದು ಮೆಚ್ಚಿ ನುಡಿದರು ಚೂಪು ಮೂಗಿನ ಸುಂದರಾಂಗ ಕುನಾಲ್ ಕಪೂರ್.ಆಶಿಷ್ ಸೋನಿ ಅವರ ಸಂಗ್ರಹ ತುಂಬಾ ಸರಳವಾಗಿತ್ತು. ಈ ವರ್ಷ ಅವರು ರೆಸಾರ್ಟ್ ವೇರ್‌ಗಳನ್ನು ವಿನ್ಯಾಸ ಮಾಡಿದ್ದರು. ಕಪ್ಪು, ಕಡುನೀಲಿ, ಪಿಂಕ್, ಕಡು ಕಂದು ಹಾಗೂ ಪೇಲ್ ಗ್ರೇ ಬಣ್ಣದಲ್ಲಿದ್ದ ರೆಸಾರ್ಟ್ ವೇರ್‌ಗಳು ತುಂಬಾ ಸರಳವಾಗಿ ಕಂಡುಬಂದವು.

ಮೊದಲ ದಿನದ ಶೋ ಮುಗಿದಿದ್ದು ವೆನ್‌ಡೆಲ್ ರಾಡ್ರಿಕ್ಸ್ ಅವರ ಫ್ಲಾಷ್ ಸ್ಪ್ಯಾಶ್ ಸಂಗ್ರಹದೊಂದಿಗೆ. ಇವರು ತಮ್ಮ ಸಂಗ್ರಹಕ್ಕೆ ಗಾಢ ಬಣ್ಣಗಳನ್ನು ಆಯ್ದುಕೊಂಡಿದ್ದರು.ಗೌನ್‌ಗಳು, ಡ್ರೆಸ್‌ಗಳು ಹಾಗೂ ಕುರ್ತಾಗಳು ಇವರ ಪ್ರಮುಖ ವಿನ್ಯಾಸವಾಗಿತ್ತು. 

 ನಟಿ ಎವ್ಲಿನ್ ಶರ್ಮಾ ರಾಡ್ರಿಕ್ಸ್ ಸಂಗ್ರಹದ ಶೋ ಸ್ಟಾಪರ್ ಆಗಿ ಭಾಗವಹಿಸಿದ್ದರು. ಕಣ್ಣು ಕುಕ್ಕುವ ಗಾಢ ಕೇಸರಿ ಬಣ್ಣದ ಗೌನ್‌ನ ಎದೆಯ ಬಳಿ ತೆರೆದುಕೊಂಡಿತ್ತು.ನಿತಂಬಗಳಾಕಾರ ಢಾಳಾಗಿ ಕಾಣುವಂಥ ಗೌನ್ ತೊಟ್ಟು ರ‌್ಯಾಂಪ್ ವಾಕ್ ಮಾಡಿದ ಎವ್ಲಿನ್ ಅರೆ ಬಿರಿದ ಮೊಗ್ಗಿನಂತೆ ಕಂಡರು. ಎಲ್ಲರ ಹೃದಯಕ್ಕೂ ಕಿಚ್ಚು ಹಚ್ಚಿದರು.  `ರಾಡ್ರಿಕ್ಸ್ ವಿನ್ಯಾಸದ ವಸ್ತ್ರಗಳನ್ನು ಧರಿಸಿದಾಗ ನನ್ನೊಳಗೆ ಬೆಚ್ಚನೆಯ ಭಾವ ಮೂಡುತ್ತದೆ. ಅವರು ಆಯ್ದುಕೊಳ್ಳುವ ಗಾಢ ಬಣ್ಣ ನನಗೆ ತುಂಬ ಇಷ್ಟ. ರಾಡ್ರಿಕ್ಸ್ ಸಂಗ್ರಹ ಫ್ಯಾಷನಬಲ್ ಆಗಿರುತ್ತದೆ. ಇವರ ಸಂಗ್ರಹವನ್ನು ಧರಿಸಿದವರು ಗುಂಪಿನ ನಡುವೆಯೂ ಎದ್ದು ಕಾಣಿಸುತ್ತಾರೆ.

 

ಗಾಢ ಬಣ್ಣಗಳು ನಮ್ಮಳಗೆ ಹೊಸ ಉಲ್ಲಾಸ ತುಂಬುವುದರ ಜತೆಗೆ ಮಾದಕತೆ ತಂದುಕೊಡುತ್ತದೆ~ ಎನ್ನುತ್ತಾ ರ‌್ಯಾಂಪ್ ಮೇಲೆ ರಾಡ್ರಿಕ್ಸ್‌ಗೆ ಕೆನ್ನೆ ತಾಕಿಸಿ ಮುತ್ತಿಕ್ಕಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry