ಬ್ಲ್ಯಾಕ್‌ಬೆರಿ: ಮುಂಬೈನಲ್ಲಿ ಸರ್ವರ್ ಸ್ಥಾಪನೆ

7

ಬ್ಲ್ಯಾಕ್‌ಬೆರಿ: ಮುಂಬೈನಲ್ಲಿ ಸರ್ವರ್ ಸ್ಥಾಪನೆ

Published:
Updated:

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದಿರುವ ರಿಸರ್ಚ್ ಇನ್ ಮೋಷನ್ ಕಂಪೆನಿ (ಆರ್‌ಐಎಂ) ಕೊನೆಗೂ  ಮುಂಬೈನಲ್ಲಿ ಸರ್ವರ್ ಸ್ಥಾಪಿಸಿದೆ.

ಭದ್ರತೆಯ ದೃಷ್ಟಿಯಿಂದ, ದೇಶದಲ್ಲಿ ಸರ್ವರ್ ಸ್ಥಾಪಿಸಬೇಕು ಇಲ್ಲವೇ, ಬ್ಲ್ಯಾಕ್ ಬೆರಿ ಮೆಸೆಂಜರ್ ಸೇವೆಯಲ್ಲಿ ಬಳಸುವ ಗೂಢ ಲಿಫಿಗಳ ಮೇಲೆ ನಿಗಾ ವಹಿಸುವ ತಂತ್ರಜ್ಞಾನ ಒದಗಿಸುವಂತೆ ಭಾರತ ಸರ್ಕಾರ ಕೆನಡಾ ಮೂಲದ `ರಿಮ್~ಗೆ ಸೂಚಿಸಿತ್ತು.

ಇತ್ತೀಚೆಗೆ ನಡೆದ ಕೇಂದ್ರ ಗೃಹ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ, ಭದ್ರತಾ ಅಧಿಕಾರಿಗಳು `ರಿಮ್~ ಮುಂಬೈನಲ್ಲಿ ಸರ್ವರ್ ಸ್ಥಾಪಿಸಿದೆ ಎಂದು ಧೃಡೀಕರಿಸಿದ್ದಾರೆ.  ಭದ್ರತಾ ಅಧಿಕಾರಿಗಳ ತಂಡವೊಂದು   ಸರ್ವರ್ ಪರಿ ಶೀಲಿಸಿದೆ. ಕಾನೂನಿನ ವ್ಯಾಪ್ತಿಯಲ್ಲೇ ಬ್ಲ್ಯಾಕ್‌ಬೆರಿ ಮೆಸೆಂಜರ್ ಸೇವೆಯ ಮೇಲೆ ನೇರವಾಗಿ ನಿಗಾ ವಹಿಸಲು ಸರ್ಕಾರಕ್ಕೆ ಶೀಘ್ರದಲ್ಲಿಯೇ ಕಂಪೆನಿಯು ಅನುಮತಿ  ನೀಡುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

`ಪುಷ್‌ಮೇಲ್~ ಸೇವೆ ಒದಗಿಸುತ್ತಿರುವ ನೋಕಿಯಾ ಕಂಪೆನಿಗೂ ಬ್ಲ್ಯಾಕ್‌ಬೆರಿ ಮಾದರಿಯಲ್ಲಿಯೇ ದೇಶದಲ್ಲಿ  ಸರ್ವರ್ ಸ್ಥಾಪಿಸುವಂತೆ ದೂರಸಂಪರ್ಕ ಇಲಾಖೆ ಸೂಚನೆ ನೀಡಿದೆ. ಬ್ಲ್ಯಾಕ್ ಬೆರಿ ಮೆಸೆಂಜರ್ ಸೇವೆ ಮತ್ತು ವಾಣಿಜ್ಯ ಇ-ಮೇಲ್‌ಗಳಲ್ಲಿ ಬಳಸುವ ಗೂಢ ಲಿಫಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಭದ್ರತೆಯ ದೃಷ್ಟಿಯಿಂದ ಇವು ಅಪಾಯಕಾರಿ ಎಂದು ಭದ್ರತಾ ಸಂಸ್ಥೆಗಳು ಆರೋಪಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry