ಬುಧವಾರ, ಜೂನ್ 23, 2021
29 °C

ಭಂಡಾರಿ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ ಬುಧವಾರ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸುವ ಮುನ್ನ ಚುನಾ­ವಣಾ ಆಯೋಗದ ನಿರ್ದೇಶನ­ದಂತೆ ಘೋಷಣಾ ಪ್ರಮಾಣ ಪತ್ರವನ್ನು ಚುನಾವಣಾಧಿಕಾರಿ ಸಮ್ಮುಖ­ದಲ್ಲಿ ಮಂಜುನಾಥ ಭಂಡಾರಿ ಓದಿ ಹೇಳಿ, ಸಹಿ ಹಾಕಿದರು.ಶಾಸಕ ಕೆ.ಬಿ.ಪ್ರಸನ್ನಕುಮಾರ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಭಂಡಾರಿ ಅವರ ಪುತ್ರಿ ದೀಕ್ಷಾ ಭಂಡಾರಿ, ಕಾನೂನು ಸಲಹೆಗಾರ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಡೆದ ಮೆರ­ವ­ಣಿ­ಗೆಯಲ್ಲಿ ಸಚಿವರಾದ ಕಿಮ್ಮನೆ ರತ್ನಾಕರ, ವಿನಯಕುಮಾರ್‌ ಸೊರಕೆ ಮತ್ತಿ­ತರ ಮುಖಂಡರು ಪಾಲ್ಗೊಂಡಿದ್ದರು.‘ನಾಮಪತ್ರದೊಂದಿಗೆ ಬಿ ಫಾರಂ ಸಲ್ಲಿಸಿಲ್ಲ. ಬುಧವಾರ ಸಂಜೆ ವೇಳೆಗೆ ಬಿ ಫಾರಂ ನಮ್ಮ ಕೈ ಸೇರಿದೆ. ಗುರು­ವಾರ ಚುನಾವಣಾಧಿಕಾರಿಗೆ ನಾಮ­ಪತ್ರ ಸಲ್ಲಿಸಲಾಗುವುದು’ ಎಂದು ಪಕ್ಷ ಜಿಲ್ಲಾ ಘಟಕದ ಅಧ್ಯಕ್ಷ ಆರ್.­ಪ್ರಸನ್ನಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.