ಸೋಮವಾರ, ಅಕ್ಟೋಬರ್ 14, 2019
22 °C

ಭಂವರಿ ದೇವಿ ಬೂದಿ ಡಿಎನ್‌ಎ ಪರೀಕ್ಷೆಗೆ

Published:
Updated:

ಜೋಧ್‌ಪುರ(ಐಎಎನ್‌ಎಸ್): ನರ್ಸ್ ಭಂವರಿ ದೇವಿ ಶವವನ್ನು ಸುಡಲಾಗಿದೆ ಎಂದು ಹೇಳಲಾದ ಸ್ಥಳದಿಂದ ಕಲೆಹಾಕಿದ ಬೂದಿಯನ್ನು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯವು (ಸಿಎಫ್‌ಎಸ್‌ಎಲ್) ಡಿಎನ್‌ಎ ಪರೀಕ್ಷೆಗಾಗಿ ಶುಕ್ರವಾರ ದೆಹಲಿಗೆ ಕಳುಹಿಸಿದೆ.ವವಜಲೋದಾ ಗ್ರಾಮದಲ್ಲಿ ಭಂವರಿ ದೇವಿ ಶವವನ್ನು ಸುಡಲಾಗಿದೆ ಎನ್ನಲಾದ ಸ್ಥಳದಿಂದ ಸಿಬಿಐ ಹಾಗೂ ಸಿಎಫ್‌ಎಸ್‌ಎಲ್ ತಂಡವು ಬೂದಿ ಹಾಗೂ ಎಲುಬಿನ ಚೂರುಗಳನ್ನು ಸಂಗ್ರಹಿಸಿತ್ತು.ಬಿಷ್ಣಾರಾಂ ಬಿಷ್ಣೋಯಿ ನೇತೃತ್ವದ ಅಪರಾಧಿಗಳ ತಂಡ ಕಳೆದ ಸೆಪ್ಟೆಂಬರ್ 1ರಂದು ಭಂವರಿ ಅವರ ಶವವನ್ನು ಸುಟ್ಟುಹಾಕಿತ್ತು ಎನ್ನಲಾಗಿದೆ.ಇಲ್ಲಿನ ಕೋರ್ಟ್, ಗುರುವಾರ ಬಿಷ್ಣಾರಾಂ ಬಿಷ್ಣೋಯಿ ಹಾಗೂ ಈತನ ಸಹಚರ ಕೈಲಾಶ್ ಜಾಖರ್‌ನನ್ನು ಇದೇ 16ವರೆಗೆ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸುಪರ್ದಿಗೆ ಒಪ್ಪಿಸಿದೆ.ಸಿಬಿಐ ನಿರ್ದೇಶಕ ಎ.ಪಿ.ಸಿಂಗ್ ಅವರೊಂದಿಗೆ ಸಿಎಸ್‌ಎಫ್‌ಎಲ್ ತಂಡ ಗುರುವಾರ ಇಲ್ಲಿಗೆ ಆಗಮಿಸಿದೆ.

Post Comments (+)