ಬುಧವಾರ, ಏಪ್ರಿಲ್ 14, 2021
24 °C

ಭಕ್ತರಿಂದ ಮಠ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಳೇದಗುಡ್ಡ: ‘ಮಠಗಳ ಅಭಿವೃದ್ಧಿ ಒಬ್ಬರಿಂದ ಆಗಿಲ್ಲ, ಮಠದ ಭಕ್ತರಿಂದ ಮಠವಾಗಿದೆ. ಪರೋಪಕಾರ ಮಾಡುವುದರಿಂದ ಪಾಪ ಪರಿಹಾರವಾಗುತ್ತದೆ’ ಎಂದು ಅಭಿನವ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು. ಅವರು ಈಚೆಗೆ ಸಮೀಪದ ಇಂಜಿನವಾರಿ ಒಪ್ಪತ್ತೇಶ್ವರ ಶಾಖಾ ಮಠದ ರಥೋತ್ಸವದ ನಂತರ ಗುರು ಕುಮಾರೇಶ್ವರ ವೇದಿಕೆಯಲ್ಲಿ ನಡೆದ ಶರಣ ತತ್ವಚಿಂತನ ಮಂಥನ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.ಸೂರಟೂರ ಹಿರೇಮಠದ ಫಕೀರೇಶ್ವರ ಸ್ವಾಮೀಜಿ, ಅಸೂಟಿ ಹಿರೇಮಠದ ರೇವಣ ಸಿದ್ದಯ್ಯ ಸ್ವಾಮೀಜಿ, ‘ಶರಣರಲ್ಲಿ, ದೇವರಲ್ಲಿ ಭಕ್ತಿ ಉಳಿದುಕೊಂಡಿರುವುದು ಅದು ಗ್ರಾಮೀಣ ಜನರಲ್ಲಿ ಮಾತ್ರ’ ಎಂದರು.  ಮರಡಿಮಠದ ಕಾಡಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಸದಸ್ಯ ಎಂ.ಜಿ. ಕಿತ್ತಲಿ ಮಾತನಾಡಿದರು. ತಾ.ಪಂ. ಸದಸ್ಯ ಆಸಂಗೆಪ್ಪ ಚಿನ್ನಪ್ಪ ನಕ್ಕರಗುಂದಿ, ಎಂ.ಜಿ. ಕಿತ್ತಲಿ, ಮುಕಪ್ಪ ಮಾದರ, ಕೆ.ಡಿ. ಓಲೇಕಾರ, ಸೂಳಿಕೇರಿ ತಾ.ಪಂ. ಸದಸ್ಯ ಪ್ರಮೋದ ಭೀಮಪ್ಪ ಕವಡಿಮಟ್ಟಿ, ಬಸವರಾಜ ಯಂಡಿಗೇರಿ, ಮಲ್ಲಿಕಾರ್ಜುನ ರಾಜನಾಳ, ಸಿ.ಎಂ. ಜೋಶಿ ಅವರನ್ನು ಸನ್ಮಾನಿಸಲಾಯಿತು.ಅತಿಥಿಗಳಾಗಿ ಶಿವನಗೌಡ ತಿಪ್ಪಣ್ಣಗೌಡ ಗೌಡರ, ಬಸವರಾಜ ಪಾಲತಿ, ತಿಪ್ಪಣ್ಣ ಎಸ್. ಗೌಡರ, ಭೈಲಪ್ಪ ಕಾ. ಗಾಬಿನ, ಬಸವರಾಜ ವಾಲಿಕಾರ, ಭೀಮಪ್ಪ ಡಿ. ಮಲ್ಯನ್ನವರ, ಸಾಬಣ್ಣ ದೂಳಿ, ವಿಜಯ ಹ. ಗಾಳಿ, ಕೆಂಚನಗೌಡ ಗೌಡರ ಮುಂತಾದವರಿದ್ದರು.ಬೀಳ್ಕೊಡುಗೆ ಇಂದು:  ಇಲ್ಲಿನ ಭಂಡಾರಿ ಹಾಗೂ ರಾಠಿ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಮಾ. 5ರಂದು ಬೆಳಿಗ್ಗೆ 11ಗಂಟೆಗೆ ಜರುಗಲಿದೆ.ಪಿಇಟಿ ಸಂಸ್ಥೆ ಚೇರಮನ್ ರಾಜಶೇಖರ ಶೀಲವಂತ ಅಧ್ಯಕ್ಷತೆ ವಹಿಸುವರು. ಮುಖ್ಯಅತಿಥಿಗಳಾಗಿ ಜಿಲ್ಲಾ ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಎಂ.ಕೆ. ಹೊನ್ನಾಕಟ್ಟಿ, ಸಂಸ್ಥೆ ಗೌರವ ಕಾರ್ಯದರ್ಶಿ ಜುಗಲಕಿಶೋರ ಭಟ್ಟಡ, ನಿರ್ದೇಶಕ ಎಸ್.ಎಸ್. ಪಟ್ಟಣಶೆಟ್ಟಿ,  ಪ್ರಾಚಾರ್ಯ ಎಸ್.ಎಸ್. ನಾಯನೇಗಲಿ, ಮಹಾವಿದ್ಯಾಲಯದ ಪ್ರಾಚಾರ್ಯ ಆರ್.ಎಸ್. ಶೀಲವಂತ ಉಪಸ್ಥಿತರಿರುವರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.