ಭಕ್ತರಿಂದ ಸಹಸ್ರಲಿಂಗ ದರ್ಶನ

7

ಭಕ್ತರಿಂದ ಸಹಸ್ರಲಿಂಗ ದರ್ಶನ

Published:
Updated:
ಭಕ್ತರಿಂದ ಸಹಸ್ರಲಿಂಗ ದರ್ಶನ

ಶಿರಸಿ: ಎಲ್ಲೆಡೆ ಶಿವರಾತ್ರಿ ಹಬ್ಬವನ್ನು ಭಕ್ತಿಭಾವದಿಂದ ಪೂಜೆ ಸಲ್ಲಿಸುವ ಜೊತೆಗೆ ಆಚರಿಸಿದರೆ ತಾಲ್ಲೂಕಿನ ಸಹಸ ಲಿಂಗದಲ್ಲಿ ಭಕ್ತಿ ಜೊತೆಗೆ ಪರಿಸರ ಸ್ನೇಹಿಯಾಗಿ ಆಚರಿಸಲಾಯಿತು.ಪಶ್ಚಿಮಘಟ್ಟ ಕಾರ್ಯಪಡೆ ಮಾರ್ಗ ದರ್ಶನದಲ್ಲಿ ಭೈರುಂಬೆ ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಗಳು ಸೋಮವಾರ ಸಹಸ್ರಲಿಂಗಕ್ಕೆ ಭೇಟಿ ನೀಡುವ ಭಕ್ತರಲ್ಲಿ ಪ್ಲಾಸ್ಟಿಕ್ ಹಾಗೂ ತಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಮಾಲಿನ್ಯ ಮಾಡದಂತೆ ಜಾಗೃತಿ ಮೂಡಿಸಿದವು.ಈ ಸಂದರ್ಭದಲ್ಲಿ ಮಾತನಾಡಿದ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ, ಇಲಾಖೆಗಳ ಸಹ ಭಾಗಿತ್ವದ ಜೊತೆ ಸಾರ್ವಜನಿಕರು ಸಹ ಪ್ಲಾಸ್ಟಿಕ್ ನಿಷೇಧಿಸುವಲ್ಲಿ ಸಹಕರಿಸ ಬೇಕು. ನದಿ- ಹಳ್ಳಗಳು ಜಲಮೂಲ ಗಳಾಗಿದ್ದು, ಶಿವ ರಾತ್ರಿ ಸಂದರ್ಭದಲ್ಲಿ ಪೂಜೆ ಸಲ್ಲಿಸುವಾಗ ಪವಿತ್ರ ಸ್ಥಳಗಳನ್ನು ಮಲೀನಗೊಳಿಸಬಾರದು. ನದಿಗಳು ತಾಜ್ಯಗಳಿಂದ ಮಲೀನಗೊಳ್ಳುತ್ತಿವೆ ಎಂದರು.ನದಿ ಕಲುಷಿತಗೊಳ್ಳುವದನ್ನು ತಪ್ಪಿಸಲು ಸಮಗ್ರ ಯೋಜನೆ ರೂಪಿಸಿ ಬಜೆಟ್‌ನಲ್ಲಿ ಘೋಷಿಸುವಂತೆ ಇದೇ 29ರಂದು ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ರಾಜ್ಯದ 20 ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ನದಿ-ಹಳ್ಳಕೊಳ್ಳಗಳ ಪರಿಸ್ಥಿತಿ ಪರಿ ಶೀಲನೆ ಮಾಡಲಾಗಿದೆ ಎಂದರು.ಶಿರಸಿ ನಗರಸಭೆಯ ತಾಜ್ಯದಿಂದ ಕೆಂಗ್ರೆ ಹೊಳೆ ನೀರು ಕಲುಷಿತಗೊಂಡಿ ರುವ ಸಂಗತಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನದಿಂದ ಗೊತ್ತಾಗಿದೆ. ಈ ಕುರಿತು ಕ್ರಮ ವಹಿಸುವಂತೆ ತಿಳಿಸ ಲಾಗುವದು. ಸಹಸ್ರಲಿಂಗದಲ್ಲಿ ಸಹ ಮುಂದಿನ ದಿನಗಳಲ್ಲಿ ಸ್ಥಳೀಯ ಪಂಚಾಯಿತಿ ಪ್ಲಾಸ್ಟಿಕ್ ನಿಷೇಧದ ಫಲಕ ಅಳವಡಿಸುವ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸಬೇಕು ಎಂದು ಅಶೀಸರ ಹೇಳಿದರು. ತಾತ್ಕಾಲಿಕ ತೆರೆಯುವ ಅಂಗಡಿಗಳಿಗೆ ಪೂರ್ವಭಾವಿ ಯಾಗಿ ಸೂಚನೆ ನೀಡಿ ಪ್ಲಾಸ್ಟಿಕ್ ಬಳಸದಂತೆ ಸೂಚನೆ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆ ಮಾಡಿದ ಅಂಗಡಿಗಳಿಗೆ ಎಚ್ಚರಿಕೆ ನೀಡಲಾಗಿದೆ.ತಾಜ್ಯಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಹಾಕುವಂತೆ ಆಗಮಿಸಿದ ಭಕ್ತರಿಗೂ ಸೂಚನೆ ನೀಡಲಾಗಿದೆ ಎಂದು ಭೈರುಂಬೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಪಾದ ಭಟ್ಟ ಹೇಳಿದರು.ಸ್ಥಳೀಯರಾದ ಸುರೇಶ ಹಕ್ಕಿಮನೆ, ಅನಂತ ಹೆಗಡೆ, ಆರ್‌ಎಫ್‌ಓ ಮುನಿ ತಿಮ್ಮ ಇದ್ದರು. ರಾಜ್ಯದ ವಿವಿಧ ಭಾಗಗಳ ಜನರು ಸಹಸ್ರಲಿಂಗಕ್ಕೆ ಆಗಮಿಸಿ ಶಿವನಿಗೆ ಪೂಜೆ ಸಲ್ಲಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry