ಸೋಮವಾರ, ಮೇ 17, 2021
23 °C

ಭಕ್ತರಿಗೆ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ ರಸ್ತೆಯಲ್ಲಿ ಬನಶಂಕರಿ ದೇವಾಲಯದವರೆಗೂ ಮೆಟ್ರೊ ಕೆಲಸ ಸಾಗುತ್ತಿದೆ. ದೇಗುಲದ ಹತ್ತಿರ ದೊಡ್ಡ ಗುಂಡಿಗಳಿವೆ. ಇದರಲ್ಲಿಯೇ ಭಕ್ತಾದಿಗಳು ಹೋಗಬೇಕು.ಇತ್ತೀಚೆಗೆ ಸಾರಿಗೆ ಸಚಿವರು ಭೇಟಿ ಇತ್ತಿದ್ದರು. ಇದು ಅವರ ಗಮನಕ್ಕೆ ಬಂದಿರಲಿಕ್ಕಿಲ್ಲ.

ಅದಕ್ಕಾಗಿ ಸಾರಕ್ಕಿ ಸಿಗ್ನಲ್‌ನಿಂದ ಬನಶಂಕರಿ ಸಿಗ್ನಲ್‌ವರೆಗೆ ತಾತ್ಕಾಲಿಕವಾಗಿ ಎಲ್ಲಾ ವಾಹನ ಸಂಚಾರ ಸ್ಥಗಿತಗೊಳಿಸಬೇಕು.ಮೋನೋ ಟೈಪ್, ಕುಮಾರಸ್ವಾಮಿ, ಇಸ್ರೊ ಬಡಾವಣೆ ಮೂಲಕ ವಾಹನ ಸಂಚರಿಸುವಂತೆ ಮಾಡಬೇಕು.ಇದರಿಂದ ಹಬ್ಬದ ಸಮಯದಲ್ಲಿ ಬರುವ ಭಕ್ತರು ಸುರಕ್ಷಿತವಾಗಿ ಸಂಚರಿಸಬಹುದಾಗಿದೆ. ಕೂಡಲೇ ಬಿಎಂಟಿಸಿ ಈ ಬಗ್ಗೆ ಗಮನ ಹರಿಸಲಿ. ಮಾರಾಟಗಾರರನ್ನು ನಿಷೇಧಿಸಲಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.