ಶುಕ್ರವಾರ, ನವೆಂಬರ್ 22, 2019
27 °C

ಭಕ್ತಿಭಾವ ಮಧ್ಯೆ ಹನುಮ ಜಯಂತಿ ಆಚರಣೆ

Published:
Updated:

ಹುಮನಾಬಾದ್: ಪಟ್ಟಣದ ವಿವಿಧೆಡೆ ಇರುವ ಹನುಮಾನ ಮಂದಿರದಲ್ಲಿ ಗುರುವಾರ ಭಕ್ತಿಭಾವ ಮಧ್ಯೆ ಹನುಮಾನ ಜಯಂತಿ ಆಚರಿಸಲಾಯಿತು.

ಜಯಂತಿ ಅಂಗವಾಗಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ ಜಾವದ ವರೆಗೆ ಭಜನೆ ಕಾರ್ಯಕ್ರಮ ನೆರವೇರಿಸಲಾಗಿತ್ತು. ಬೆಳಿಗ್ಗೆ 6.15ಕ್ಕೆ ಹನುಮನ ತೊಟ್ಟಿಲು ಕಾರ್ಯಕ್ರಮ ನಡೆಯಿತು. ನಂತರ ಸಂಜೆ ಕೋಲಾಟ ಮೊದಲಾದ ವೈವಿಧ್ಯಮಯ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು.ರಾತ್ರಿ 7ಕ್ಕೆ ಆರಂಭಗೊಂಡ ಹನುಮ ದೇವರ ಪಲ್ಲಕ್ಕಿ ಉತ್ಸವ ಜವಾಹರ ರಸ್ತೆ, ಶಿವಚಂದ್ರ ರಸ್ತೆ, ಬಪ್ಪಣ್ಣ ಓಣಿ, ಬಾಲಾಜಿ ವೃತ್ತ, ಬಸವೇಶ್ವರ ವೃತ್ತ, ಹಳೆ ಅಡತ್ ಬಜಾರ ಮಾರ್ಗವಾಗಿ ಶಿವಾಜಿ ವೃತ್ತ ಅಲ್ಲಿಂದ ಪಲ್ಲಕ್ಕಿ ಉತ್ಸವ ದೇವಸ್ಥಾನ ತಲುಪಿತು.ದೇವಸ್ಥಾನ ಸಮಿತಿ ಪ್ರಮುಖರಾದ ಶಂಕರರೆಡ್ಡಿ ಮುಡಬಿ, ಮಾಣಿಕರೆಡ್ಡಿ ಕಣ್ಣಿ, ಜಗನ್ನಾಥರಾವ ಧುಮಾಳೆ, ಮಾರುತಿರಾವ ಕಾಳಮದರಗಿ, ರಮೇಶ ಜಾಧವ್, ಮೋಹನರೆಡ್ಡಿ, ರಮೇಶರೆಡ್ಡಿ, ಶಿವರಾಮ ಜಾಧವ್, ವಿನಾಯಕ ಧುಮಾಳೆ, ನಾಮದೇವ ಧುಮಾಳೆ, ಸಂತೋಷ ಕಾಳಮದರಗಿ, ಚಂದ್ರಕಾಂತ ಮಂಡಾ, ವಿಠ್ಠಲರೆಡ್ಡಿ ಕೊಳಾರ, ಜೈಕಾಂತರೆಡ್ಡಿ, ಶಿವಲಿಂಗರೆಡ್ಡಿ, ಪ್ರತಾಪರೆಡ್ಡಿ, ಶಿವಾರೆಡ್ಡಿ, ವೆಂಕಟರಾವ ನಿಲಮನಳ್ಳಿ, ಸಿದ್ದಣ್ಣ ಪೂಜಾರಿ, ಮಚೇಂದ್ರರೆಡ್ಡಿ ಮೊದಲಾದವರು ಪಲ್ಲಕ್ಕಿ ಉತ್ಸವದಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)